ಕೆಪಿಸಿಸಿ ಅಧ್ಯಕ್ಷರ ಸ್ಥಾನ ಆಯ್ಕೆ ಕಗ್ಗಂಟು –  ‘ಸಂಗೀತ ಕುರ್ಚಿ’ ಸ್ಪರ್ಧೆ ಆಯೋಜನೆಗೆ ಮನವಿ.!

Public TV
2 Min Read
KPCC A

ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆಗಾಗಿ ಫುಲ್ ಪೈಪೋಟಿ ಶುರುವಾಗಿದ್ದು, ನಾನಾ – ನೀನಾ ಅನ್ನೋ ಮೇಲಾಟ ಶುರುವಾಗಿತ್ತು. ಡಿಕೆಗೆ ಬಹುತೇಕ ಪಟ್ಟ ಒಲಿಯೋದು ಖಚಿತ ಅಂತಾ ಗೊತ್ತಿದ್ರೂ, ಟಗರು, ಪರಂ, ಸದಾ ಕೆಂಪು ಕಣ್ಣನ್ನು ದೊಡ್ಡದಾಗಿ ಮಾಡಿಕೊಂಡು ಕನ್‍ಫ್ಯೂಶನ್‍ನಲ್ಲೇ ಇರುವ ಎಂ.ಬಿ.ಪಾಟೀಲ್ ಈಗ ವಿಚಿತ್ರ ಮನವಿಯನ್ನು ಹೈಕಮಾಂಡ್‍ಗೆ ರವಾನಿಸಿದ್ದಾರಂತೆ. ತಿಹಾರ್ ಜೈಲಿಗೆ ಹೋಗಿ ಬಂದ್ರೂ ಬಂಡೆ ಅದೃಷ್ಟ ಕಂಡು ಒಳಗೊಳಗೆ ಕುದ್ದು ಹೋಗಿರುವ ಮೂವರು, ಕೊನೆ ಪ್ರಯತ್ನ ಮಾಡೋಣ ಅಂತಾ ಸಂಗೀತ ಕುರ್ಚಿ ಆಯೋಜನೆ ಮಾಡೋಣ, ಇದ್ರಲ್ಲಿ ವಿನ್ ಆದವನೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟುಬಿಡಿ ಅಂತಾ ಮಗು ಮನಸಿನ ರಾಹುಲ್ ಗಾಂಧಿಗೆ ಮೊದಲು ಮನವಿ ಮಾಡಿಕೊಂಡಿದ್ರಂತೆ. ತೋಳೇರಿಸಿಕೊಂಡು ರಾಹುಲ್ ಗಾಂಧಿ ಕೂಡ ಮಮ್ಮಿ ಅಂತಾ ಸೋನಿಯಾ ಬಳಿ ಇವ್ರ ಮನವಿ ಇಟ್ಟಿದ್ದಾರೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ.
———–

PAVITHRA EE NEWS ODLEBEDI IDU TAMASHEGAAGI 1ನಿಂಬೆಹಣ್ಣು ಕೊಡ್ಲೇನ್ರಪ್ಪಾ…! ಸಚಿವಕಾಂಕ್ಷಿಗಳಿಗೆ ರೇವಣ್ಣ ಸರ್‍ಪ್ರೈಸ್ ಫೋನ್ ಕಾಲ್..!

ದೇಕೋ ಏನೋ ಸಚಿವ ಸಂಪುಟ ವಿಸ್ತರಣೆ ಆಗ್ತಿಲ್ಲ, ಬೈ ಎಲೆಕ್ಷನ್‍ನಲ್ಲಿ ಗೆದ್ದ ಶಾಸಕರಂತೂ ಚಾತಕ ಪಕ್ಷಿಯಂತೆ ಕಾದಿದ್ದೇ ಕಾದಿದ್ದು. ಮೋದಿ ಬಂದ್ರೂ, ಅಮಿತ್ ಷಾ ರಾಜ್ಯಕ್ಕೆ ಬಂದ್ಮೇಲೂ ಊಹೂ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕೇ ಇರಲಿಲ್ಲ. ರಾಜಾಹುಲಿಯ ಅಬ್ಬರವೂ ಹೈಕಮಾಂಡ್ ಮುಂದೆ ನಡೆಯಂಗಿಲ್ಲ ಠುಸ್ ಪಟಾಕಿ ಅಂತಾ ಸಚಿವಾಕಾಂಕ್ಷಿಗಳಿಗೂ ಗೊತ್ತಾಗಿ ಬಿಟ್ಟಿದೆ. ಅವ್ರಿಗೂ ಬಿಎಸ್ ವೈ ಮನೆಗೆ ಅಲೆದು ಅಲೆದು ಚಪ್ಪಲಿಯಷ್ಟೇ ಸವೆಯೋದು ಮಾತ್ರ ಅಂತಾ ಗೊತ್ತಾಗಿದೆ. ಸಂಕ್ರಾಂತಿ ಮುಗಿದ್ಮೇಲೆ ಫೈನಲು ಅಂತಾ ಅಂದುಕೊಂಡವರಿಗೆಲ್ಲ ನಿರಾಸೆ ಕಾದಿತ್ತು. ಅತ್ತ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ತೀನಿ ಅಂತಾ ದಾವೋಸ್ ಕಡೆ ಬಿಎಸ್‍ವೈ ಕೋಟು ಗೀಟು ಹಾಕ್ಕೊಂಡ್ರು ಹೊರಟ್ರು. ಇದ್ರಿಂದ ಮತ್ತಷ್ಟು ಉರ್ಕೊಂಡಿರುವ ಅಕಾಂಕ್ಷಿಗಳು ಸಪ್ಪೆ ಮೋರೆಯಲ್ಲಿ ಕೂತುಬಿಟ್ಟಿದ್ದಾರೆ. ಸ್ಯಾಡ್ ಮೂಡ್‍ನಲ್ಲಿರುವ ಇವ್ರಿಗೆಲ್ಲ ಮಾನ್ಯ ರೇವಣ್ಣನವರು ಸರ್‍ಪ್ರೈಸ್ ಕಾಲ್ ಮಾಡಿದ್ದಾರಂತೆ. ಮೈತ್ರಿ ಸರ್ಕಾರ ಉರುಳಿಸಿದ ಬೇಜಾರು ಮನಸಲ್ಲೇ ಇಟ್ಕೊಂಡು, ‘ನೋಡ್ರಪ್ಪ ನಮ್ಗೆ ಕೆಟ್ಟದು ಮಾಡಿದ್ರೂ ನಿಮ್ಗೆ ಒಳ್ಳೆಯದ್ದನ್ನೇ ಬಯಸ್ತೀನಿ. ನಂದು ಸ್ವಾತಿ ನಕ್ಷತ್ರ, ನನ್ನ ನಂಬಿ ನಿಂಬೆಹಣ್ಣು ಕೊಡ್ತೀನಿ ಎಲ್ಲಾ ಸಮಸ್ಯೆನೂ ಫಟಾಫಟ್ ಅಂತಾ ಬಗೆಹರಿಯುತ್ತೆ’ ಅಂತಾ ಸಲಹೆ ಕೊಟ್ರಂತೆ. ಇದು ವ್ಯಂಗ್ಯವೋ ನಿಜವೋ ತಿಳಿಯದಂತೆ ಆಯ್ತು ಬುಡಣ್ಣ ಅಂತಾ ಫೋನ್ ಇಟ್ರಂತೆ ಶಾಸಕರು.

Revanna Lemon

———–

[ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]

Share This Article
Leave a Comment

Leave a Reply

Your email address will not be published. Required fields are marked *