ಸ್ಯಾಂಡಲ್‌ವುಡ್ ಕನಸಿನ ರಾಣಿ ಮಾಲಾಶ್ರೀ (Malashree) ನಟನೆಯ ಕೆಂಡದ ಸೆರಗು (Kendada Seragu) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಮಸ್ತ್ ಆಗಿರುವ ಚೆಂದದ ಹುಡುಗಿ ಜೊತೆ ಯುವ ನಟ ಹರೀಶ್ ಅರಸು (Harish Arasu) ಹೆಜ್ಜೆ ಹಾಕಿದ್ದಾರೆ.
‘ಕೆಂಡದ ಸೆರಗು’ ಚಿತ್ರವನ್ನು ನಿರ್ದೇಶಿಸಿರುವ ರಾಕಿ ಸೋಮ್ಲಿ ‘ಈ ಹುಡುಗಿ ಎಷ್ಟು ಚೆಂದ’ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಕಂಠ ಕುಣಿಸಿದ್ದು, ವೀರೇಶ್ ಕಬ್ಲಿ ಟ್ಯೂನ್ ಹಾಕಿದ್ದಾರೆ. ಪಿಆರ್‌ಒ ಕಂ ಯುವ ನಟ ಹರೀಶ್ ಅರಸು ಹಾಗೂ ಪೂರ್ಣಿಮಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯಿತು ಭಟ್ಟರ ‘ಕರಟಕ ದಮನಕ’ ಸಿನಿಮಾ ಪೋಸ್ಟರ್
ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ‘ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.
ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]