ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತ ವಿದ್ಯಾಪೀಠ (PUBLiC TV Vidyapeeta) 6ನೇ ಆವೃತ್ತಿ ಶನಿವಾರ ಭರ್ಜರಿಯಾಗಿ ಶುರುವಾಗಿದ್ದು, ಮೊದಲ ದಿನವೇ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ಇಂದು ಕೂಡ ಎಜುಕೇಶನ್ ಎಕ್ಸ್‌ಪೋ ನಡೆಯಲಿದೆ.
Advertisement
ಭಾನುವಾರವಾದ ಇಂದು ಕೂಡಾ ಎಜುಕೇಶನ್ ಎಕ್ಸ್‌ಪೋ (Education Expo) ಇರಲಿದ್ದು, ಪ್ರವೇಶ ಉಚಿತವಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ನಡೆಯಲಿದೆ. ಹ್ಯಾಂಡ್‍ರೈಟಿಂಗ್ ಇನ್‌ಸ್ಟಿಟ್ಯೂಟ್ ಇಂಡಿಯಾದ ಸಂಸ್ಥಾಪಕರಾದ ರಫೀ ಉಲ್ಲಾ ಬೇಗ್‍ರಿಂದ ಉಪನ್ಯಾಸ ನಡೆಯಲಿದೆ. ಸಿಇಟಿ ಸಂಬಂಧ ಸೆಮಿನಾರ್ ಸಹ ಜರುಗಲಿದೆ. ಇದಲ್ಲದೇ ಬೈಸಿಕಲ್, ಲ್ಯಾಪ್ ಟಾಪ್, ಸೇರಿದಂತೆ ಹಲವು ಬಂಪರ್ ಗಿಫ್ಟ್ ಗೆಲ್ಲೋ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಬನ್ನಿ ಭಾಗವಹಿಸಿ ಜ್ಞಾನಾರ್ಜನೆ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲಿ.
Advertisement
Advertisement
ವಿದ್ಯಾಪೀಠಕ್ಕೆ ಶನಿವಾರ ಬೆಳಗ್ಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಚಾಲನೆ ನೀಡಿದ್ರು. ಗಾರ್ಡನ್ ಸಿಟಿ ಯುನಿವರ್ಸಿಟಿಯ ಚಾನ್ಸಲರ್ ವಿ.ಜಿ. ಜೋಸೆಫ್, ರೇವಾ ಯುನಿವರ್ಸಿಟಿ ಚಾನ್ಸಲರ್ ಶಾಮರಾಜು, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷರಾದ ಡಿ.ಕೆ. ಮೋಹನ್ ಅವರು ಭಾಗವಹಿಸಿದ್ರು. 105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನಾರ್ಜನೆಗೆ ದಾರಿದೀಪ ಆದವು. ಇದನ್ನೂ ಓದಿ: ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಅನ್ನೋ ಆಲೋಚನೆ ಬೇಡ: ಹೆಚ್.ಆರ್.ರಂಗನಾಥ್
Advertisement
ಮೊದಲ ದಿನವಾದ ಶನಿವಾರ ಶಿಕ್ಷಣ ಮೇಳದಲ್ಲಿ ಸಿಇಟಿ, ನೀಟ್ ಸಂಬಂಧ ಉಪನ್ಯಾಸ ನಡೆಯಿತು. ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಜೊತೆಗೆ ವಿದ್ಯಾರ್ಥಿಗಳಿಗೆ ವಿವಿಧ ಗೇಮ್ಸ್ ಆಯೋಜಿಸಲಾಗಿತ್ತು. ಸ್ಲೋ ಸೈಕಲ್ ರೈಸ್, ಮ್ಯೂಸಿಕಲ್ ಛೇರ್, ಲೋಗೋ ಗೇಮ್, ಪಿಕ್ ಅಂಡ್ ಸ್ಪೀಕ್ ಸ್ಪರ್ಧೆ ನಡೀತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದರು. ಪ್ರತಿ 1 ಗಂಟೆಗೆ ಲಕ್ಕಿ ಡಿಪ್ ಮೂಲಕ ವಿದ್ಯಾರ್ಥಿಗಳು ಆಕರ್ಷಕ ಗಿಫ್ಟ್ ಪಡೆದ್ರು. ಪಿಯುಸಿ ಟಾಪರ್ಸ್ ಗಳಿಗೆ ಆಕರ್ಷಕ ಗಿಫ್ಟ್ ಕೂಡಾ ಸಿಕ್ತು. ಪೋಷಕರು ಕೂಡಾ ವಿದ್ಯಾಪೀಠ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.