– ಕರೆ ಮಾಡಿ ವಾರ್ಷಿಕ ಪರೀಕ್ಷೆಗಳ ಬಗೆಗಿನ ಸಂದೇಹ ನಿವಾರಿಸಿಕೊಳ್ಳಿ
ಬೆಂಗಳೂರು: ಜನವರಿ ಮತ್ತು ಫೆಬ್ರವರಿ ತಿಂಗಳು ಆರಂಭವಾಯ್ತು ಅಂದರೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಭಯ ಶುರುವಾಗುತ್ತದೆ. ವಾರ್ಷಿಕ ಪರೀಕ್ಷೆಗಳು ಹತ್ತಿರವಾಗುತ್ತಿದೆ. ಪರೀಕ್ಷೆ ಹೇಗಿರುತ್ತೋ, ಪ್ರಶ್ನೆ ಪತ್ರಿಕೆ ಹೇಗಿರುತ್ತೋ ಎಂಬ ಹಲವಾರು ಸಂದೇಹಗಳು ವಿದ್ಯಾರ್ಥಿಗಳಲ್ಲಿ ಉಧ್ಭವವಾಗುತ್ತವೆ. ಹೀಗಾಗಿ ವಾರ್ಷಿಕ ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಉದ್ಭವವಾಗುವ ಎಲ್ಲಾ ಸಂದೇಹಗಳ ನಿವಾರಣೆಗಾಗಿ ಶಿಕ್ಷಣ ಸಚಿವರು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರೊಂದಿಗೆ ಫೋನ್ ಕಾರ್ಯಕ್ರಮ ಆಯೋಜನೆ ಮಾಡಿದೆ. ಇಂದು ಸಂಜೆ 5 ಗಂಟೆಯಿಂದ 6.30ರ ವರೆಗೂ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಕರೆ ಮಾಡಿ ಅಹವಾಲು, ಸಲಹೆ ಮತ್ತು ಸೂಚನೆಗಳನ್ನು ಪಡೆಯಬಹುದಾಗಿದೆ.
ವಾರ್ಷಿಕ ಪರೀಕ್ಷೆಗೆ ಸಂಬಂಧಪಟ್ಟಂತೆ ಇರುವಂತಹ ಸಂದೇಹಗಳನ್ನ ನಿವಾರಣೆಗೆ ಆಯೋಜನೆ ಮಾಡಿದ್ದು, ಈ ಬಾರಿ ವಿಶೇಷವಾಗಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೊತೆಗೆ ಪೋಷಕರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಹೀಗಾಗಿ ಕರೆ ಮಾಡಿ ಮಾತನಾಡಬಹುದಾಗಿದೆ. ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಲು ಇಲಾಖೆ 08026725654-08026725655 ಈ ನಂಬರ್ ನೀಡಿದೆ.
SSLC / PUC ಮಕ್ಕಳು ಹಾಗೂ ಪೋಷಕರು ಇದರ ಉಪಯೋಗ ಪಡೆದುಕೊಳ್ಳಬಹುದು.
ಈ ಸುದ್ದಿಯನ್ನು ಮತ್ತು ಫೋನ್ ನಂಬರನ್ನು Share ಮಾಡಿ. pic.twitter.com/5tr97W4tTH
— S.Suresh Kumar (@nimmasuresh) January 27, 2020