ಬೆಂಗಳೂರು: ಶಾಲೆ ಪ್ರಾರಂಭ ಮಾಡಿ ಅಂತ ತಜ್ಞರು ಗ್ರೀನ್ ಸಿಗ್ನಲ್ ಕೊಟ್ಟರೆ, ಮರು ದಿನವೇ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಶುಕ್ರವಾರ ನಡೆಯುವ ಸಿಎಂ ಸಭೆಯಲ್ಲಿ ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ 1-9 ಅಥವಾ 5-9 ನೇ ತರಗತಿ ಪ್ರಾರಂಭ ಮಾಡುತ್ತೇವೆ. ಕೋವಿಡ್ ಪರಿಣಾಮ ಜಾಸ್ತಿ ಆಗದೇ ಹೋದ್ರೆ ನಿಗದಿಯಂತೆ ಎಸ್‍ಎಸ್‍ಎಲ್‌ಸಿ, ದ್ವಿತೀಯ ಪಿಯುಸಿ ಎಕ್ಸಾಂ ಮಾಡಲಾಗುತ್ತದೆ. ಎಕ್ಸಾಂಗೆ ಎಲ್ಲಾ ಸಿದ್ಧತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಮುಗಿಯುವ ಹಂತದಲ್ಲಿಯೂ ಇಲ್ಲ: WHO ಮುಖ್ಯಸ್ಥ
Advertisement
Advertisement
ಶಾಲೆಗಳು ಸುರಕ್ಷಿತ ತಾಣ ಆಗಿದೆ. ಅಗತ್ಯ ಬಿದ್ರೆ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭ ಮಾಡುತ್ತೇವೆ. ಜಿಲ್ಲೆಗಳಲ್ಲೂ ಡಿಸಿಗಳೇ ಶಾಲೆ ಪ್ರಾರಂಭದ ಬಗ್ಗೆ ತೀರ್ಮಾನ ಮಾಡುತ್ತಾರೆ. ಅಂತ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಯಾರೇ ಕೋವಿಡ್ ನಿಯಮ ಉಲ್ಲಂಘಿಸಿದರೂ ಕ್ರಮ: ಬೊಮ್ಮಾಯಿ