ಹಾಸನ: ನಾಳೆಯಿಂದ 9 ಮತ್ತು 10ನೇ ತರಗತಿ ಆರಂಭವಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿಸಿ.ನಾಗೇಶ್ ತಿಳಿಸಿದ್ದಾರೆ.
ಹಿಜಬ್ ಮತ್ತು ಕೇಸರಿ ಶಾಲಿನ ವಿವಾದ ಜೋರಾಗುತ್ತಲೇ ಸರ್ಕಾರ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಿತ್ತು. ಇದೀಗ ನಾಳೆಯಿಂದ ಒಂಬತ್ತು ಮತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು ಸೋಮವಾರ ನಡೆಯುವ ಸಿಎಂ ಸಭೆಯ ನಂತರ ಪಿಯುಸಿ ಹಾಗೂ ಪದವಿ ತರಗತಿಗಳನ್ನು ತೆರೆಯುವ ಬಗ್ಗೆ ಯೋಚನೆ ಮಾಡಿ ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಹಿಜಬ್ ಯೂನಿಫಾರ್ಮ್ ಅಂಗ ಅಲ್ಲ. ಯಾವ ಕಾರಣಕ್ಕೆ ಆ ಹೆಣ್ಣುಮಕ್ಕಳು ಆ ರೀತಿ ವರ್ತನೆ ಮಾಡಿದರು ಅರ್ಥ ಆಗುತ್ತಿಲ್ಲ. ಈ ಹಿಜಬ್ ವಿವಾದದ ಹಿಂದೆ ಕೆಲ ಮುಸ್ಲಿಂ ಸಂಘಟನೆಗಳ ಕೈವಾಡ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಎಲ್ಲ ಹೊರಬರಲಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ
Advertisement
Advertisement
ಒಟ್ಟಾರೆ ವಿದ್ಯಾ ದೇಗುಲದಲ್ಲಿ ಹಿಜಬ್ ಮತ್ತು ಕೇಸರಿ ಶಾಲಿನ ಗಲಾಟೆ ಆರಂಭವಾಗಿ ಶಿಕ್ಷಣ ವ್ಯವಸ್ಥೆಗೆ ಸಮಸ್ಯೆಯಾಗತೊಡಗಿತ್ತು. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿಗೆ ರಜೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಒಂಬತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು, ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿ ಸಹಕರಿಸುತ್ತಾರೆ ಕಾದು ನೋಡಬೇಕಿದೆ. ಇದನ್ನೂ ಓದಿ: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ