ಬೆಂಗಳೂರು: ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಕೈ ಬಿಡೋಲ್ಲ. ಯಾವುದು ಪಠ್ಯ ಲೋಪ ಇದೆಯೋ ಅದನ್ನು ಮಾತ್ರ ಸರಿ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಉದ್ದೇಶ ಪೂರ್ವಕವಾಗಿ ಪರಿಷ್ಕರಣೆಯಲ್ಲಿ ತಪ್ಪಾಗಿದೆ ಅಂತ ಹೇಳುತ್ತಿದ್ದಾರೆ. ಹೀಗಾಗಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ. ಜನರಿಗೆ ಸತ್ಯ ತಿಳಿಸಲು ಸಾರ್ವಜನಿಕರಿಗೆ ಪಠ್ಯ ಪರಿಷ್ಕರಣೆ ದಾಖಲಾತಿ ಪ್ರಕಟ ಮಾಡುತ್ತೇವೆ. ಮುಡಂಬಡಿತ್ತಾಯ ಸಮಿತಿಯಲ್ಲಿ ಏನ್ ಇತ್ತು, ಬರಗೂರು ಸಮಿತಿ ಏನ್ ಮಾಡಿದೆ, ನಾವು ಏನು ಮಾಡಿದ್ದೇವೆ ಅಂತ ಜನರೇ ತೀರ್ಮಾನ ಮಾಡಲಿ. ಸಾರ್ವಜನಿಕರು ಏನಾದರೂ ಆಕ್ಷೇಪಣೆ ಸಲ್ಲಿಸಿದರೆ ಅದನ್ನು ಸರಿ ಮಾಡುತ್ತೇವೆ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವ ಪದವನ್ನು ಸೇರಿಸುತ್ತೇವೆ. ಬಸವಣ್ಣನವರ ಎರಡು ಸಾಲುಗಳನ್ನು ಸೇರ್ಪಡೆ ಮಾಡುತ್ತೇವೆ. ಸಣ್ಣಪುಟ್ಟ ಲೋಪಗಳು ಆಗುತ್ತದೆ. ಅದನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ದಿಕ್ಕೆಟ್ಟಿದೆ. ಅದಕ್ಕಾಗಿ ಹೀಗೆ ಈ ವಿಚಾರವಾಗಿ ವಿವಾದ ಮಾಡುತ್ತಿದೆ. ಕಾಂಗ್ರೆಸ್‍ಗೆ ಭಯ ಶುರುವಾಗಿದೆ. ದಿಕ್ಕು ತಪ್ಪಿದೆ ಹೀಗಾಗಿ ಇಂತಹ ಸುಳ್ಳು ಹೇಳುತ್ತಿದೆ. ಸಿದ್ದರಾಮಯ್ಯ ಇಷ್ಟು ದಿನ ನಿದ್ರೆ ಮಾಡಿದ್ದರು. ಈಗ ಎದ್ದು ಆರ್‍ಎಸ್‍ಎಸ್ ಬಗ್ಗೆ ಮಾತನಾಡುತ್ತಾರೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಕಾಂಗ್ರೆಸ್‍ಗೆ ರಾಷ್ಟ್ರೀಯತೆ ಬಗ್ಗೆ ಮಕ್ಕಳು ಕಲಿಯುವುದು ಇಷ್ಟ ಇಲ್ಲ. ದೇಶಭಕ್ತಿ ಬಗ್ಗೆ ಕಲಿಯುವುದು ಬೇಕಿಲ್ಲ. ಹೀಗಾಗಿ ಎಲ್ಲದ್ದಕ್ಕೂ ವಿರೋಧ ಮಾಡುತ್ತಿದೆ. ನರಸಿಂಹರಾವ್ ಬರುವವರೆಗೂ ಒಂದೇ ಸಮುದಾಯದವರು ಶಿಕ್ಷಣ ಮಂತ್ರಿ ಆಗಿದ್ದರು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. 75 ವರ್ಷದ ಕಾಂಗ್ರೆಸ್ ದುರಾಡಳಿತ ಜನರಿಗೆ ಗೊತ್ತಾಗುತ್ತದೆ ಅಂತ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರು ಅರೆಸ್ಟ್