ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ (Government School) ಮಾಹಿತಿ ನೀಡದೇ ಮುಖ್ಯ ಶಿಕ್ಷಕರು ಬೇಕಾಬಿಟ್ಟಿ ಸಭೆ-ಸಮಾರಂಭಗಳಿಗೆ ಹೋಗುವುದಕ್ಕೆ ಶಿಕ್ಷಣ ಇಲಾಖೆ (Education Department) ಬ್ರೇಕ್ ಹಾಕಿದೆ.
ಶಾಲಾ ಸಮಯದಲ್ಲಿ ಇನ್ನು ಮುಂದೆ ಮುಖ್ಯ ಶಿಕ್ಷಕರು ಸಭೆ, ಸಮಾರಂಭಗಳಿಗೆ ಹೋಗುವಂತಿಲ್ಲ ಎಂದು ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
Advertisement
ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಹೋಗುವ ಮುನ್ನ ಮುಖ್ಯ ಶಿಕ್ಷಕರು ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಮಾಹಿತಿ, ಆಹ್ವಾನ ಪತ್ರಿಕೆ, ಸಭಾ ಸೂಚನೆ ಪತ್ರವನ್ನು ಕಡ್ಡಾಯವಾಗಿ ನಮೂದಿಸಿ ಹೋಗಬೇಕು ಎಂದು ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಅವರು ಯಾರನ್ನಾದರೂ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು: ಭಾರತದ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪದ ಬಗ್ಗೆ ಟ್ರಂಪ್ ಸುಳಿವು
Advertisement
Advertisement
ಶಿಕ್ಷಣ ಇಲಾಖೆ ಆದೇಶ ಯಾಕೆ?
ಶಾಲಾ ಸಮಯದಲ್ಲಿ ಬಹುತೇಕ ಮುಖ್ಯ ಶಿಕ್ಷಕರು ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದರು. ಯಾವುದೇ ಮಾಹಿತಿ ಇಲ್ಲದೇ ನುಮತಿ ಪಡೆಯದೇ ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದರಿಂದ ಶಾಲಾ ದಿನಚರಿ ಮೇಲೆ ಪರಿಣಾಮ ಬೀರುತ್ತಿತ್ತು.
Advertisement
ಮುಖ್ಯ ಶಿಕ್ಷಕರು ಇಲ್ಲದೇ ಇರುವುದರಿಂದ ಬೋಧನೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರಲ್ಲಿ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಹೋಗುವಾಗ ಮಾಹಿತಿ ನೀಡುವುದು ಕಡ್ಡಾಯ. ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.