ಬೆಂಗಳೂರು: ನಗರದಲ್ಲಿ ಶಾಲೆಗಳ (School Time) ಸಮಯ ಬದಲಾವಣೆ ಮಾಡುವ ಪ್ರಕ್ರಿಯೆಯನ್ನ ಶಿಕ್ಷಣ ಇಲಾಖೆ ಶುರು ಮಾಡಿದೆ. ಈ ಸಂಬಂಧ ಶುಕ್ರವಾರ ಶಿಕ್ಷಣ ಇಲಾಖೆ (Education Department) ಮಹತ್ವದ ಸಭೆ ಕರೆದಿದ್ದು, ಸಭೆಯಲ್ಲಿ ಸ್ಕೂಲ್ ಟೈಂ ಬದಲಾವಣೆ ನಿರ್ಧಾರ ಮಾಡೋ ಸಾಧ್ಯತೆ ಇದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆ ಆಗುತ್ತಿದೆ ಎನ್ನುವ ಕಾರಣ ಹೈಕೋರ್ಟ್ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಶಾಲಾ ಶಿಕ್ಷಣ ಇಲಾಖೆ ಸಮಯ ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಮಯ ಬದಲಾವಣೆ ಕುರಿತು ಅಕ್ಟೋಬರ್ 5 ರಂದು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸಭೆ ಕರೆದಿದ್ದು, ಅಂದೇ ಸಮಯ ಬದಲಾವಣೆಗೆ ತೀರ್ಮಾನ ಮಾಡೋ ಸಾಧ್ಯತೆ ಇದೆ.
Advertisement
Advertisement
ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಸಾರಿಗೆ ಇಲಾಖೆ, ಸಂಚಾರಿ ಪೊಲೀಸ್ ಇಲಾಖೆ, ಪೋಷಕರ ಸಂಘ, ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಾಲಾ ವಾಹನ ಅಸೋಸಿಯೇಷನ್ ಸದಸ್ಯರು, ಶಿಕ್ಷಕರ ಸಂಘದ ಸದಸ್ಯರನ್ನ ಸಭೆಗೆ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಸಮಯ ಬದಲಾವಣೆ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: Big Boss Kannada 10: ಜಿಯೋ ಸಿನಿಮಾದಲ್ಲೂ ನೋಡಿ ಬಿಗ್ ಬಾಸ್ ಸೀಸನ್ 10
Advertisement
ಈಗ ಶಾಲಾ ಸಮಯ ಬೆಳಗ್ಗೆ 9.30 ರಿಂದ ಸಂಜೆ 4.30ಕ್ಕೆ ಇದೆ. ಈ ಸಮಯವನ್ನ ಅರ್ಧ ಗಂಟೆ ಅಥವಾ ಒಂದು ಗಂಟೆ ಮುಂಚೆ ಪ್ರಾರಂಭ ಮಾಡುವ ಪ್ರಸ್ತಾವನೆ ಶಿಕ್ಷಣ ಇಲಾಖೆ ಮುಂದೆ ಇದೆ. ಬೆಳಗ್ಗೆ 8.30 ರಿಂದ 3.30 ಅಥವಾ ಬೆಳಗ್ಗೆ 9 ರಿಂದ ಸಂಜೆ 3.30ವರೆಗೆ ಶಾಲೆ ತೆರೆಯೋ ಪ್ರಸ್ತಾಪ ಇದ್ದು, ಯಾವ ಸಮಯ ಅಂತ ಸಭೆಯಲ್ಲಿ ತೀರ್ಮಾನ ಆಗಲಿದೆ.
Advertisement
ಒಟ್ಟಿನಲ್ಲಿ ಬೆಂಗಳೂರಿಗೆ ಸೀಮಿತ ಆಗುವಂತೆ ಶಾಲಾ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದ್ದು, ಆದಷ್ಟು ಬೇಗ ಶಾಲಾ ಸಮಯ ಬದಲಾವಣೆ ಆಗುವ ಸಂಭವವಿದೆ.
Web Stories