LatestMain Post

ಶಿಕ್ಷಣ ಇಲಾಖೆ ಎಡವಟ್ಟು – ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಆಹ್ವಾನಿತರಾಗಿ ದಿ.ಆನಂದ್ ಮಾಮನಿ ಹೆಸರು

ಚಿಕ್ಕೋಡಿ: ಕೆಲ ದಿನಗಳ ಹಿಂದೆಯಷ್ಟೇ ನಿಧನರಾದ ಶಾಸಕ ಹಾಗೂ ವಿಧಾನಸಭೆ ಉಪಸಭಾಪತಿ ದಿವಗಂತ ಶಾಸಕ ಆನಂದ್‌ ಮಾಮನಿ (Anand Mamani) ಹೆಸರು ಆಹ್ವಾನ ಪತ್ರಿಕೆಯಲ್ಲಿ (Invitation)  ಹಾಕಿ ಚಿಕ್ಕೋಡಿ (Chikkodi) ಶಿಕ್ಷಣ ಇಲಾಖೆ (Education Department) ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢ ಶಾಲೆಗಳ ಕ್ರೀಡಾಕೂಟದ (Sports Meet) ಆಹ್ವಾನ ಪತ್ರಿಕೆಯಲ್ಲಿ ಆನಂದ ಮಾಮನಿ ಹೆಸರು ಬಳಸಲಾಗಿದೆ. ವಿಶೇಷ ಆಮಂತ್ರಿತರಲ್ಲಿ ಆನಂದ ಮಾಮನಿ ಹೆಸರು ಮುದ್ರಿಸಲಾಗಿದೆ. ನಾಳೆ ಚಿಕ್ಕೋಡಿಯಲ್ಲಿ ಆಯೋಜನೆಗೊಂಡಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯಲ್ಲಿ ದಿವಂಗತರ ಹೆಸರು ಹಾಕಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಯಮತ್ತೂರು ಸಿಲಿಂಡರ್ ಸ್ಫೋಟ ಕೇಸ್ – ತನಿಖೆ ವಹಿಸಿಕೊಂಡ NIA

ಅಕ್ಟೋಬರ್ 23 ರಂದು ಆನಂದ ಮಾಮನಿ ನಿಧನರಾಗಿದ್ದರು. ಕೆಲ ದಿನಗಳ ಹಿಂದೆ ನಿಧನರಾಗಿದ್ದರೂ ನಾಳೆ ನಡೆಯಲಿರುವ ಕ್ರೀಡಾಕೂಟ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಮನಿ ಹೆಸರು ಹಾಕಲಾಗಿದ್ದು, ಇದೀಗ ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ಕೇಳಿಬಂದಿದೆ. ಇದನ್ನೂ ಓದಿ: ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

Live Tv

Leave a Reply

Your email address will not be published. Required fields are marked *

Back to top button