ರಾಯಚೂರು: ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ವಾಮಿ ವಿವೇಕಾನಂದರ 150ನೇ ಜಯಂತಿಯಂದು ಅವಹೇಳನಕಾರಿ ಲೇಖನ ಬರೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಹಿನ್ನೆಲೆ ಅಮಾನತುಗೊಂಡಿದ್ದಾರೆ.
ಸನಾವುಲ್ಲಾ ಅಮಾನತಾಗಿರುವ ಅಧಿಕಾರಿ. ಅವರು ಲಿಂಗಸುಗೂರು ತಾಲೂಕಿನಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ(ಸಿಆರ್ ಪಿ) ಆಗಿ ಕೆಲಸ ಮಾಡುತ್ತಿದ್ದರು.
Advertisement
Advertisement
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವ್ಯಾಟ್ಸಾಪ್ ಗ್ರೂಪ್‍ನಲ್ಲಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಲೇಖನ ಬರೆದು ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಆರ್ ಪಿ ಸನಾವುಲ್ಲಾನನ್ನು ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ಜಿ.ಎಂ. ವೃಷಬೇಂದ್ರಯ್ಯ ತಿಳಿಸಿದ್ದಾರೆ. ಜಿಪಂ ಸಿಇಓ ಆದೇಶದ ಮೇರೆಗೆ ಸನಾವುಲ್ಲಾ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ
Advertisement
ಸರ್ಕಾರಿ ನೌಕರನಾಗಿ ರಾಷ್ಟ್ರನಾಯಕನ ಬಗ್ಗೆ ಅವಹೇಳನ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ ಬಾಲ್ಯ ಜೀವನ, ಬದುಕಿನ ಬಗ್ಗೆ ಅವಹೇಳನ ಮಾಡುವ ಲೇಖನ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ