Exclusive: ಈ ನಿಯಮ ಪಾಲನೆ ಮಾಡಿದ್ರೆ ಮಾತ್ರ ಶಾಲೆಗಳು ಅಧಿಕೃತ, ಇಲ್ಲವಾದ್ರೆ ಎತ್ತಂಗಡಿ

Public TV
2 Min Read
Private schools 2

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಅನಧಿಕೃತ ಖಾಸಗಿ ಶಾಲೆಗಳಿಗೆ (Private schools) ಬ್ರೇಕ್ ಬೀಳೋದು ಖಚಿತವಾಗಿದೆ.

ಶಿಕ್ಷಣ ಇಲಾಖೆಯಲ್ಲೂ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿ ಬಂದ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರ್ಕಾರ (Government of Karnataka) ಅನಧಿಕೃತ ಶಾಲೆಗಳ ಮೇಲೆ ಪ್ರಹಾರ ನಡೆಸಿದೆ. ಅನಧಿಕೃತ ಖಾಸಗಿ ಶಾಲೆಗಳ ತೆರವಿಗಾಗಿ ಆಪರೇಷನ್ ಕ್ಲೀನ್ ಅಭಿಯಾನ ಪಾರ್ಟ್-2 ಶುರು ಮಾಡಿದೆ. ಇದನ್ನೂ ಓದಿ: ಸುವೆಂದು ಅಧಿಕಾರಿಗೆ ಕಪ್ಪು ಬಾವುಟ ಪ್ರದರ್ಶನ – ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

SCHOOL 1

ಇತ್ತೀಚೆಗಷ್ಟೇ ಅನಧಿಕೃತ ಖಾಸಗಿ ಶಾಲೆಗಳನ್ನು ಪಟ್ಟಿ ಮಾಡಲು ಅಭಿಯಾನ ಶುರು ಮಾಡಿತ್ತು. ಇದೀಗ ಶಿಕ್ಷಣ ಇಲಾಖೆ (Education Department) ರಿಲೀಸ್ ಮಾಡಿರೋ ಮಾನದಂಡಗಳು ಇದ್ರೆ ಮಾತ್ರ ಆ ಶಾಲೆಗಳು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ನಿಯಮ ಪಾಲನೆ ಮಾಡದೇ ಇರೋ ಶಾಲೆಗಳಿಗೆ ಬೀಗ ಬಿಳೋದು ಖಚಿತವಾಗಿದೆ.

SCHOOL 3

ಹೀಗಾಗಿ ಪ್ರತಿ ಜಿಲ್ಲೆಗಳಲ್ಲಿ ಶಾಲೆಗಳ ಮಾಹಿತಿ ಸಂಗ್ರಹಕ್ಕೆ ಬಿಇಓ, (BEO) ಡಿಡಿಪಿಐಗಳಿಗೆ (DDPI) ಟಾಸ್ಕ್ ನೀಡಲಾಗಿದ್ದು, ಅನಧಿಕೃತ ಶಾಲೆಗಳನ್ನ ಪಟ್ಟಿ ಮಾಡಿ ಕೊಡುವಂತೆ ಮಾನದಂಡ ರಿಲೀಸ್ ಮಾಡಿದೆ. ಇದನ್ನೂ ಓದಿ: ಸಮಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿದ್ದಕ್ಕೆ ಬಾಲಕನ ಮೇಲೆ ಬಿಸಿನೀರು ಸುರಿದ ಶಿಕ್ಷಕ

SCHOOL 2

ಯಾವ ಶಾಲೆಗಳು ಅನಧಿಕೃತ ಆಗುತ್ತವೆ?

  • ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 30, 31 ಅಡಿ ನೋಂದಣಿ ಪಡೆಯದ ಶಾಲೆಗಳು
  • ಶಾಲಾ ಮಾನ್ಯತೆಯನ್ನು 1 ವರ್ಷಕ್ಕಿಂತ ಹೆಚ್ಚು ನವೀಕರಣ ಮಾಡದಿರುವುದು
  • ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 36, ಆರ್‌ಟಿಇ ಕಾಯ್ದೆ 2009 ಅಡಿಯ ಮಾನ್ಯತೆ ಪಡೆಯದ ಶಾಲೆಗಳು
  • ಪೂರ್ವಾನುಮತಿ ಇಲ್ಲದೆ ಸ್ಥಳಾಂತರ ಮಾಡಿದ ಶಾಲೆಗಳು
  • ಅನಧಿಕೃತವಾಗಿ ಬೇರೆಯವರಿಗೆ ಹಸ್ತಾಂತರ ಮಾಡಿದ ಶಾಲೆಗಳು
  • ಇಲಾಖೆಯಿಂದ ನೋಂದಣಿ ಪಡೆಯದ ಉಪಶಾಲೆಗಳು
  • ಹೆಚ್ಚುವರಿ ತರಗತಿಯನ್ನು ಅನುಮತಿ ಪಡೆಯದೇ ಪ್ರಾರಂಭಿಸಿರುವ ಶಾಲೆಗಳು
  • ಅನುಮತಿ ಪಡೆದ ನಂತರ ಮತ್ತೊಂದು ಮಾಧ್ಯಮದಲ್ಲಿ ಪಠ್ಯ ಬೋಧನೆ ಮಾಡುವುದು
  • ಸರ್ಕಾರ ಅನುಮತಿ ನೀಡಿದ ಪಠ್ಯಕ್ರಮ ಬದಲಾಗಿ ಬೇರೆ ಪಠ್ಯ ಬೋಧನೆ ಮಾಡುವ ಶಾಲೆಗಳು
  • ಶಾಲೆ ಸ್ಥಾಪನೆಗೆ ಅನುಮತಿ ಕೊಟ್ಟ ಜಾಗದಿಂದ ಅನುಮತಿ ಪಡೆಯದೇ ಸ್ಥಳಾಂತರ ಮಾಡಿದ ಶಾಲೆಗಳು
  • ಅನುಮತಿ ಪಡೆಯದೇ ಬೇರೊಂದು ಆಡಳಿತ ಮಂಡಳಿ ನಡೆಸುವುದು
  • ಬೇರೆ ಪಠ್ಯಕ್ರಮದ ಅನುಮತಿ ಪಡೆದ ಬಳಿಕವೂ ರಾಜ್ಯ ಪಠ್ಯಕ್ರಮ ಬೋಧನೆ ಮಾಡುವ ಶಾಲೆಗಳು

Live Tv
[brid partner=56869869 player=32851 video=960834 autoplay=true]

Share This Article