ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ – ಖಾದ್ಯ ತೈಲದ ಬೆಲೆ ಇಳಿಸಲು ಮುಂದಾದ ಸರ್ಕಾರ

Public TV
1 Min Read
palm oil

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಳಿಸಿದ ಬೆನ್ನಲ್ಲೇ ಜನ ಸಾಮಾನ್ಯರಿಗೆ, ಅದರಲ್ಲೂ ಗೃಹಿಣಿಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೊಂದು ಗಿಫ್ಟ್ ಸಿಕ್ಕಿದೆ. ಅಡುಗೆಗೆ ಬಳಸುವ ಖಾದ್ಯ ತೈಲದ ಬೆಲೆಯನ್ನು ಇಳಿಕೆ ಮಾಡುವ ಕುರಿತು ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.

oil

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ತಾಳೆ ಎಣ್ಣೆ, ಕಡಲೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆಗಳ ಬೆಲೆಗಳನ್ನು ಸ್ಲಾಬ್‍ಗಳ ಆಧಾರದಲ್ಲಿ ಇಳಿಕೆ ಮಾಡುವುದಾಗಿ ತಿಳಿಸಿದೆ. ಖಾದ್ಯತೈಲದ ಬೆಲೆಗಳ ಇಳಿಕೆ ಒಂದೊಂದು ರಾಜ್ಯದಲ್ಲಿ ವಿಭಿನ್ನವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ದರ ಹೆಚ್ಚಿದೆ. ಆದರೆ ಆಮದು ಸುಂಕವನ್ನು ಕಡಿತ ಮಾಡಿರುವ ಕಾರಣ, ಅದರ ಫಲವನ್ನು ಗ್ರಾಹಕರಿಗೆ ನೀಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

ಎಣ್ಣೆ ಬೀಜಗಳ ಪೂರೈಕೆ ಹೆಚ್ಚಳವಾಗಿರುವುದು, ಡೀಸೆಲ್ ಬೆಲೆಗಳು ಇಳಿಕೆ ಆಗಿರುವುದು ಖಾದ್ಯ ತೈಲಗಳ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೆಂದು ಇಲ್ಲದ ರೀತಿಯಲ್ಲಿ ಖಾದ್ಯ ತೈಲದ ಬೆಲೆ ಶೇಕಡಾ 62 ರಷ್ಟು ಹೆಚ್ಚಳ ಕಂಡಿತ್ತು. ಕಳೆದ ಜನವರಿಯಲ್ಲಿ 90 ರೂಪಾಯಿಗೆ ಲೀಟರ್ ಪಾಮ್ ಆಯಿಲ್ ಸಿಗುತ್ತಿತ್ತು. ನಂತರ ಅದು 150 ರೂಪಾಯಿವರೆಗೂ ಮುಟ್ಟಿತ್ತು. ಇತ್ತೀಚಿಗೆ ಇಳಿಕೆ ಹಾದಿಯಲ್ಲಿತ್ತು. ಸದ್ಯ 125 ರೂಪಾಯಿಗೆ ಅದು ಸಿಗುತ್ತಿದೆ. ಸೂರ್ಯಕಾಂತಿ ಎಣ್ಣೆ ಬೆಲೆ 180 ರೂಪಾಯಿ ಆಗಿತ್ತು. ಸದ್ಯ ಅದರ ಬೆಲೆ 140 ರೂಪಾಯಿಯಿದೆ. ಈಗ ಕೇಂದ್ರ ಸರ್ಕಾರ ಖಾದ್ಯ ತೈಲ ಬೆಲೆಗಳನ್ನು ಇಳಿಸುವ ಕಾರಣ ಇದು ಮತ್ತಷ್ಟು ಇಳಿಯಲಿದೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

Share This Article