ಬೆಂಗಳೂರು: ಚಾಮರಾಜಪೇಟೆ 2.5 ಎಕರೆ ಜಾಗದ ಈದ್ಗಾ ಮೈದಾನವನ್ನು ಬಿಬಿಎಂಪಿ ಆಸ್ತಿ, ಆಟದ ಮೈದಾನ ಎಂದು ಘೋಷಿಸಲೇಬೇಕೆಂದು ನಾಗರಿಕ ಒಕ್ಕೂಟ ಸೇರಿದಂತೆ 50 ಸಂಘಟನೆಗಳು ಇಂದು ಬಂದ್‌ಗೆ ಕರೆ ನೀಡಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಿದ್ದಾರೆ. ಎರಡು ಕಡೆಯ ಹಗ್ಗ ಜಗ್ಗಾಟದ ನಡುವೆ ಬಹುತೇಕ ಶಾಂತಿಯುತ ಬಂದ್‌ಗೆ ಖಾಕಿ ಸರ್ಪಗಾವಲು ಸಾಕ್ಷಿಯಾಗಿದ್ದು, ಬಂದ್ ಯಶಸ್ವಿಯಾಗಿದೆ.
Advertisement
ಬಂದ್ ಹಿನ್ನೆಲೆ ಚಾಮರಾಜಪೇಟೆ ಸ್ತಬ್ಧವಾಗಿತ್ತು. ಬೀಗ ಜಡಿದ ಅಂಗಡಿ ಮುಗ್ಗಟ್ಟು, ಬೀದಿ ಬದಿ ವ್ಯಾಪಾರಕ್ಕೂ ಬ್ರೇಕ್, ಕಾಫಿ ಕುಡಿಯೊಕೆ ಒಂದು ಹೋಟೆಲ್ ಕೂಡಾ ತೆಗೆದಿರಲಿಲ್ಲ. ಬಹುತೇಕ ಚಾಮರಾಜಪೇಟೆಯ ವಾಣಿಜ್ಯ ಚಟುವಟಿಕೆ ಶೇ.90 ರಷ್ಟು ಸಂಪೂರ್ಣ ಬಂದ್ ಆಗಿತ್ತು.
Advertisement
ಹಾಲು, ಮೆಡಿಕಲ್ ಸೌಲಭ್ಯ ಹೊರತು ಪಡಿಸಿ ಎಲ್ಲಾ ಚಟುವಟಿಕೆ 7 ವಾರ್ಡ್‌ನಲ್ಲೂ ಪೂರ್ಣ ಸ್ತಬ್ಧವಾಗಿತ್ತು. ಹೋರಾಟದ ಮಧ್ಯೆ ರಾಜಕೀಯ ರಂಗಿನ ಕರಿನೆರಳು ಕಾಣಿಸಿತು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಕಚೇರಿ ಪಕ್ಕ ಹಣ್ಣಿನ ಜ್ಯೂಸ್ ಅಂಗಡಿ ಓಪನ್ ಮಾಡಿಸಿ, ಜ್ಯೂಸ್ ವ್ಯಾಪಾರಕ್ಕೆ ಬೆಂಬಲಿಗರು ಮುಂದಾಗಿದ್ದರು. ಈ ವೇಳೆ ಬಂದ್ ಪರ ವಿರೋಧ ಇದ್ದವರ ನಡುವೆ ವಾಗ್ವಾದ ನಡೆಯಿತು. ಇದನ್ನೂ ಓದಿ: RSS ನಿಮ್ಮ ಜೊತೆ ಇದೆ: ದಲಿತ, ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಮೋಹನ್ ಭಾಗವತ್ ಸಂವಾದ
Advertisement
Advertisement
ಮತ್ತೊಂದೆಡೆ ಶ್ರೀರಾಮ ಸೇನೆ, ನಾಗರಿಕ ಒಕ್ಕೂಟ, ಸ್ಥಳೀಯ ನಾಗರಿಕರು ಹಲವು ಬಾರಿ ಗ್ರೌಂಡ್ ಪ್ರವೇಶಿಸಿ ಜೈ ರಾಮ್, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ, ಹಿಂದೂ ಧಾರ್ಮಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟರು. ಇದೇ ವೇಳೆ ಪೊಲೀಸರು ಶಾಂತಿ ಕಾಪಾಡಲು ಹೋರಾಟಗಾರರನ್ನು ವಶಕ್ಕೆ ಪಡೆದರು.
ಬಂದ್ ಬೆಂಬಲಿಸಿ ಟೆಂಪೋ, ಲಾರಿ, ಆಟೋ ಸ್ಟ್ಯಾಂಡ್‌ಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ಮಾಡದೇ ಸ್ತಬ್ಧವಾಗಿತ್ತು. ಇತ್ತ ಸ್ಥಳೀಯ ಶಾಸಕರು ಕ್ಷೇತ್ರದತ್ತ ಸುಳಿಯಲಿಲ್ಲ.
ಚಾಮರಾಜಪೇಟೆ ಬಂದ್ ಕೇವಲ ಕ್ಷೇತ್ರಕ್ಕೆ ಸೀಮಿತವಾಗದೇ ರಾಜಕೀಯ ನಾಯಕರ ಚರ್ಚೆಗೂ ಕಾರಣವಾಯಿತು. ಕಾಂಗ್ರೆಸ್ ಸರ್ಕಾರ ಇದಕ್ಕೆಲ್ಲ ಅವಕಾಶ ಕೊಡಬಾರದು ಎಂದರೆ, ಗೃಹ ಸಚಿವರು ಶಾಂತಿಯುತ ಬಂದ್‌ಗೆ ಮಾತ್ರ ಅವಕಾಶ, ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತದೆ ಎಂದರು. ಇದನ್ನೂ ಓದಿ: 24 ದಿನಗಳಲ್ಲಿ 9ನೇ ಕೇಸ್ – ಮಂಗಳೂರಿನಿಂದ ದುಬೈಗೆ ತೆರಳಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ
ಚಾಮರಾಜಪೇಟೆ ಬಂದ್ ವಾದ-ವಿವಾದಗಳ ಮಧ್ಯೆ ಹತ್ತಾರು ವರ್ಷಗಳಿಂದ ಮಕ್ಕಳ ಆಟಕ್ಕೆ ಮೀಸಲಿದ್ದ ಮೈದಾನ ಎಂದಿನಂತೆ ಮಕ್ಕಳ ಆಟಕ್ಕೆ ಇಂದಿಗೂ ಸಾಕ್ಷಿಯಾಯಿತು. ಜನರಂತೂ ಬಂದ್ ಯಶಸ್ವಿ ಮೂಲಕ ತಮ್ಮ ಬೆಂಬಲ ಆಟದ ಮೈದಾನಕ್ಕೆ ಎಂದಿದ್ದು, ಇನ್ನು ಸರ್ಕಾರ, ಬಿಬಿಎಂಪಿ ಕಾಲಹರಣ ಮಾಡದೇ ಈದ್ಗಾ ಮೈದಾನ ಸರ್ಕಾರಿ ಸ್ವತ್ತಾ ಎಂಬುದನ್ನು ಘೋಷಣೆ ಮಾಡುವುದಷ್ಟೇ ಬಾಕಿ ಉಳಿದಿದೆ.