ನವದೆಹಲಿ: ಹೊಸ ಮದ್ಯ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ (Aam Party) ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ (Sanjay Singh) ಅವರ ಆಪ್ತರಾದ ವಿವೇಕ್ ತ್ಯಾಗಿ ಮತ್ತು ಸರ್ವೇಶ್ ಅವರಿಗೆ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಸಮನ್ಸ್ ನೀಡಿದೆ. ಅಕ್ಟೋಬರ್ 6 ರಂದು ಇಡಿ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಡಿ ಈಗಾಗಲೇ ಸಂಜಯ್ ಸಿಂಗ್ ಅವರನ್ನು ಬಂಧಿಸಿದ್ದು, ಗುರುವಾರದ ಕೋರ್ಟ್ ವಿಚಾರಣೆ ವೇಳೆ ಎಎಪಿ ವಕ್ತಾರ ಸರ್ವೇಶ್ ಮಿಶ್ರಾ ಹೆಸರು ಉಲ್ಲೇಖಿಸಿತ್ತು. ಕೇಂದ್ರ ತನಿಖಾ ಸಂಸ್ಥೆ ಪ್ರಕಾರ, ಸಂಜಯ್ ಸಿಂಗ್ ಪರವಾಗಿ ಸರ್ವೇಶ್ 1 ಕೋಟಿ ಪಡೆದಿದ್ದರು ಎನ್ನಲಾಗಿದೆ.
ಸಂಜಯ್ ಸಿಂಗ್ ಜೊತೆಗೆ ವಿವೇಕ್ ತ್ಯಾಗಿ (Vivek Tyagi) ಮತ್ತು ಸರ್ವೇಶ್ ಮಿಶ್ರಾ (Sarvesh Mishra) ಇಬ್ಬರನ್ನೂ ಜೊತೆಯಾಗಿ ಇಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 10 ರವರೆಗೆ ಕೇಂದ್ರ ಏಜೆನ್ಸಿಯ ಕಸ್ಟಡಿಗೆ ನೀಡಿದೆ. ಅವರು ಒಂದು ವರ್ಷದಲ್ಲಿ ಇಡಿಯಿಂದ ಬಂಧಿಸಲ್ಪಟ್ಟ ಮೂರನೇ ಎಎಪಿ ನಾಯಕರಾಗಿದ್ದಾರೆ. ಈ ಹಿಂದೆ ಮನೀಶ್ ಸಿಸೋಡಿಯಾ (Manish Sisodiya) ಮತ್ತು ಸತ್ಯೇಂದ್ರ ಜೈನ್ (Satyanendra Jain) ಅವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ಸುರಕ್ಷಿತ ಅಲ್ಲ- ಕೋಟಾ ಶ್ರೀನಿವಾಸ ಪೂಜಾರಿ
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರು 2 ಕೋಟಿ ರೂಪಾಯಿಗಳ ಅಪರಾಧದ ಆದಾಯದ ಸ್ವೀಕೃತಿಯೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆ ಎಂದು ಇಡಿ ಆರೋಪಿಸಿದೆ. ತನಿಖಾ ಸಂಸ್ಥೆಯ ಪ್ರಕಾರ, ಸಂಜಯ್ ಸಿಂಗ್ ಆರೋಪಿಯಿಂದ ಅನುಮೋದಕ ದಿನೇಶ್ ಅರೋರಾ ಅವರಿಂದ ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ. ಬುಧವಾರ ಅವರ ನಿವಾಸದಲ್ಲಿ 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನಂತರ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಯಿತು.
Web Stories