ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರರಕಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮತ್ತಷ್ಟು ವಿಚಾರಣೆಗೆ ನಡೆಸಿರುವ ಇಡಿ ಸದ್ಯ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೂ ನೋಟಿಸ್ ಜಾರಿ ಮಾಡಿದೆ.
ಡಿಕೆ ಶಿವಕುಮಾರ್ ಅವರ ಕುಟುಂಬವನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಇಡಿ ಅಧಿಕಾರಿಗಳು ನಾಳೆಯೇ ವಿಚಾರಣೆ ಹಾಜರಾಗುವಂತೆ ತಾಯಿ ಗೌರಮ್ಮ ಅವರಿಗೆ ಸೂಚಿಸಿದ್ದಾರೆ. ಉಷಾ ಅವರಿಗೆ ನೀಡಲಾಗಿರುವ ನೋಟಿಸ್‍ನಲ್ಲಿ ಗುರುವಾರ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಕುಟುಂಬ ಸದಸ್ಯರ ನಡುವೆ ನಡೆದಿರುವ ಹಣದ ವ್ಯವಹಾರವೇ ಕಾರಣ ಎನ್ನಲಾಗಿದ್ದು, ತಾಯಿ-ಮಗನಿಗೆ, ಮಗ-ತಾಯಿಗೆ, ಪತಿ-ಪತ್ನಿಗೆ, ಮಾವನಿಂದ ಸೊಸೆಗೆ ಸಾಲದ ವ್ಯವಹಾರ ನಡೆದಿರುವ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಜ್ಜಿ-ಮೊಮ್ಮಗಳ ವ್ಯವಹಾರ: ಡಿಕೆಶಿ ಕುಟುಂಬದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರ ಬಗ್ಗೆ ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಡಿಕೆಶಿ ತಾಯಿ ಗೌರಮ್ಮ ಅವರು ಮೊಮ್ಮಗಳ ನಡುವೆ ಕೋಟಿ ರೂ. ವ್ಯವಹಾರ ನಡೆದಿದೆ. ಮೊದಲಿಗೆ ಮೊಮ್ಮಗಳು ಐಶ್ವರ್ಯ ಅವರ ಖಾತೆಗೆ 2018 ಜೂನ್ ತಿಂಗಳಿನಲ್ಲಿ ಅಜ್ಜಿ ಗೌರಮ್ಮ ಅವರು 3 ಕೋಟಿ ರೂ.ಗಳನ್ನು ಜಮೆ ಮಾಡಿದ್ದಾರೆ. ಅಲ್ಲದೇ ಐಶ್ವರ್ಯಾ ಹೆಸರಿಗೆ 2001 ರಲ್ಲಿ ಉತ್ತರಹಳ್ಳಿಯಲ್ಲಿದ್ದ 3 ಎಕ್ರೆ ಭೂಮಿಯನ್ನು ಗಿಫ್ಟ್ ನೀಡಿ ಬರೆದುಕೊಟ್ಟಿದ್ದರು. ಆ ಬಳಿಕ 2002ರಲ್ಲಿ ಹೊಸಕೆರೆಹಳ್ಳಿಯ 3 ಎಕರೆ ಭೂಮಿಯನ್ನು ಗಿಫ್ಟ್ ನೀಡಿದ್ದರು. ಇದರ ನಡುವೆಯೇ ಐಶ್ವರ್ಯಾಗೆ ಮೂರು ನಿವೇಶನಗಳನ್ನ ಗೌರಮ್ಮ ನೀಡಿದ್ದರು. ಒಟ್ಟು 193 ಕೋಟಿ ರೂ.ಗಳನ್ನು ಐಶ್ವರ್ಯಾ ಅವರ ಖಾತೆಗೆ ಜಮೆ ಮಾಡಿದ್ದರು.
Advertisement
ಅಮ್ಮ-ಮಕ್ಕಳ ನಡುವಿನ ವ್ಯವಹಾರ: ಮೊಮ್ಮಗಳಿಗೆ ಭೂಮಿ ಹಾಗೂ ಹಣವನ್ನು ನೀಡಿದ್ದ ಗೌರಮ್ಮ ಅವರು ಪುತ್ರ ಡಿಕೆ ಶಿವಕುಮಾರ್ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ರೂ. ಹಾಗೂ 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಮತ್ತೆ ಡಿಕೆಶಿ ಅವರಿಗೆ 35 ಲಕ್ಷ ರೂ. ಗಳನ್ನು ಗೌರಮ್ಮ ಸಾಲ ನೀಡಿದ್ದಾರೆ. ಅಲ್ಲದೇ ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ರಿಂದ ಗೌರಮ್ಮ ಅವರಿಗೆ 4.89 ಕೋಟಿ ರೂ. ಸಾಲ ನೀಡಲಾಗಿದೆ.
Advertisement
ಬೇನಾಮಿ ಆಸ್ತಿ ತನಿಖೆ: ಕುಟುಂಬದ ಸದಸ್ಯರ ನಡುವೆಯೇ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿದಿದೆ. ಅಲ್ಲದೇ ಇಡಿ ಅಧಿಕಾರಿಗಳಿಗೆ ಗೌರಮ್ಮರ ಹೆಸರಲ್ಲಿ 273 ಕೋಟಿ ರೂ. ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ, ಡಿಕೆ ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋ. ರೂ. ಸಾಲ ವ್ಯವಹಾರ ನಡೆದಿದೆ. 2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ ರೂ. ಗಳಿಗೆ 4.9 ಗುಂಟೆ ಜಮೀನುನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಆದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿಗೆ.
ಡಿಕೆಶಿ ಪತ್ನಿ ಉಷಾಗೆ ಸಮನ್ಸ್ ಯಾಕೆ?
ಮೊಮ್ಮಗಳು ಹಾಗೂ ಇಬ್ಬರ ಪುತ್ರರ ನಡುವೆ ತಾಯಿ ಗೌರಮ್ಮ ಅವರು ನಡೆಸಿರುವ ವ್ಯವಹಾರದಂತೆಯೇ ಡಿಕೆಶಿ ಪತ್ನಿ ಉಷಾ ಅವರ ಹೆಸರಿನಲ್ಲೂ ಹಣದ ವ್ಯವಹಾರ ನಡೆದಿದೆ. ಪತಿ ಡಿಕೆ ಶಿವಕುಮಾರ್ ಅವರಿಗೆ ಪತ್ನಿ ಉಷಾ ಅವರು 2.60 ಕೋಟಿ ರೂ. ಸಾಲ ನೀಡಿದ್ದಾರೆ. ಮಾವ ಕೆಂಪೇಗೌಡರಿಂದ 5.42 ಕೋಟಿ ರೂ. ಹಾಗೂ ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ.
ಉಳಿದಂತೆ ಪುತ್ರಿ ಐಶ್ವರ್ಯಾ ಅವರಿಗೆ 2.70 ಕೋಟಿ ರೂ. ಹಾಗೂ ಪತಿಯ ಸಹೋದರ ಡಿಕೆ ಸುರೇಶ್‍ಗೆ 11 ಕೋಟಿ ಸಾಲ ನೀಡಿದ್ದಾರೆ. ಅಲ್ಲದೇ 13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಯನ್ನು ಉಷಾ ಅವರು ಮಾಡಿದ್ದು, ಶ್ರೀರಾಮ್ ಪ್ರಾಪರ್ಟೀಸ್‍ನಿಂದ ದಾಖಲೆ ಇಲ್ಲದ 5 ಕೋಟಿ ರೂ, ಹಣವನ್ನು ಸ್ವೀಕಾರ ಮಾಡಿದ್ದಾರೆ. ಶೋಭಾ ಡೆವಲಪರ್ಸ್, ಇಂದ್ರಪ್ರಸ್ತ ಡೆವಲಪರ್ಸ್ ನಲ್ಲಿ ಶೇ.40ರಷ್ಟು ಷೇರು ಖರೀದಿ ಸೇರಿದಂತೆ ಸಲಾರ್‍ಪುರಿಯಾ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ. ಉಳಿದಂತೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮನೆ ನಿರ್ಮಾಣಕ್ಕೆ ಫೆಡರಲ್ ಬ್ಯಾಂಕ್‍ನಲ್ಲಿ 7.61 ಕೋಟಿ ರೂ. ಹಾಗೂ ಆರ್.ಟಿ.ನಗರ ಫೆಡರಲ್ ಬ್ಯಾಂಕ್‍ನಲ್ಲಿ 4 ಕೋಟಿ 25 ಲಕ್ಷ ಮನೆ ಸಾಲ. ಶೋಭಾ ಡೆವಲಪರ್ಸ್‍ನಿಂದ 8.48 ಕೋಟಿ ರೂ.ಗಳನ್ನು ಉಷಾ ಅವರು ಸಾಲ ಪಡೆದಿದ್ದಾರೆ. ಈ ಹಣಕಾಸಿನ ವ್ಯವಹಾರ ಬಗ್ಗೆಯೂ ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.