ಬೆಂಗಳೂರು: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಗೆ ವಿಚಾರಣೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.
ಸೆ.12 ರಂದು ಬೆಳಗ್ಗೆ 11 ಗಂಟೆಗೆ ಇಡಿ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಐಶ್ವರ್ಯ ಅವರಿಗೆ ಸೂಚನೆ ನೀಡಲಾಗಿದೆ. ಡಿಕೆ ಶಿವಕುಮಾರ್ ಅವರ ಕಸ್ಟಡಿಯ ಅವಧಿ ಇದೇ 13 ರಂದು ಮುಕ್ತಾಯವಾಗುತ್ತಿರುವುದರಿಂದ 12 ರಂದೇ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿರುವುದು ವಿಶೇಷವಾಗಿದೆ.
Advertisement
Advertisement
ಐಶ್ವರ್ಯ ಅವರ ಹೆಸರಿನಲ್ಲಿ ಸೋಲ್ ಅಂಡ್ ಸೇಲ್ಸ್ ನಲ್ಲಿ 78 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ನ್ಯಾಷನಲ್ ಗ್ಲೋಬಲ್ ಕಾಲೇಜಿನಲ್ಲಿ ಐಶ್ವರ್ಯಾ ಟ್ರಸ್ಟಿಯಾಗಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ವಿಚಾರಣೆ ವೇಳೆ ಪುತ್ರಿಯ ಹೆಸರಿನಲ್ಲಿ ಹೂಡಿಕೆ ಮಾಡಿರುವ ಕುರಿತು ಇಡಿ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ಮೊತ್ತವನ್ನು ನನ್ನ ಹಿತೈಷಿಗಳು, ಕುಟುಂಬದವರು, ಸ್ನೇಹಿತರು ಕೊಟ್ಟ ಹಣ ಎಂದು ತಿಳಿಸಿದ್ದರು. ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಶ್ವರ್ಯ ಅವರಿಗೆ ಸಮನ್ಸ್ ನೀಡಿದೆ. ಇದನ್ನು ಓದಿ: ಕಸ್ಟಡಿ ಅಂತ್ಯವಾಗ್ತಿರೋ ಬೆನ್ನಲ್ಲೇ ಹೊಸ ಭೀತಿ- ಮತ್ತೆ 4 ದಿನ ಇಡಿ ಕಸ್ಟಡಿಗೆ ಡಿಕೆಶಿ
Advertisement
ಸೋಲ್ ಅಂಡ್ ಸೇಲ್ಸ್ ಯೋಜನೆಯ ಕಚೇರಿ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಹೂಡಿಕೆ ಮಾಡಿರುವ ಹಣ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಅಲ್ಲದೇ ಬೇರೆ ಬೇರೆ ಮೂಲಗಳಿಂದ ಸಂಗ್ರಹ ಮಾಡಿರುವ ಅನುಮಾನ ಕೂಡ ಅಧಿಕಾರಿಗಳಿಗೆ ವ್ಯಕ್ತವಾಗಿದೆ.
Advertisement
ಯೋಜನೆಯಲ್ಲಿ ಹೂಡಿಕೆ ಮಾಡಿರುವ ಹಣ ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ಖಚಿತ ಪಡಿಸಿಕೊಳ್ಳುವುದು ಇಡಿಯ ಉದ್ದೇಶವಾಗಿದೆ ಎನ್ನಲಾಗಿದೆ. ಅಲ್ಲದೇ ಐಶ್ವರ್ಯ ಅವರಿಗೆ ಈ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ತಿಳಿದಿದೆಯೇ ಎಂಬ ಬಗ್ಗೆಯೂ ಇಡಿ ವಿಚಾರಣೆಗೆ ನಡೆಸಲಿದೆ. ಸದ್ಯ ಇಡಿ ಅಧಿಕಾರಗಳ ಎದುರು ಐಶ್ವರ್ಯ ಯಾವ ಉತ್ತರ ನೀಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನು ಓದಿ: ಡಿಕೆಶಿಗೆ ಮತ್ತೊಂದು ಬಿಗ್ ಶಾಕ್- ಆಪ್ತನ ಮನೆ ಮೇಲೆ ಇಡಿ ದಾಳಿ
ಈ ಹಿಂದೆ 2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು.
ನಿಮ್ಮ ತಂದೆ ನಿಮ್ಮ ಹೆಸರಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಅದೆಲ್ಲಾ ನನಗೆ ಗೊತ್ತಿಲ್ಲ. ಅವರು ಇದುವರೆಗೂ ಹೇಳಿಲ್ಲ ನಾನು ಕೇಳಿಲ್ಲ ಎಂದು ಐಶ್ವರ್ಯ ಹೇಳಿದ್ದರು. ಗ್ಲೋಬಲ್ ಕಾಲೇಜಿನಲ್ಲಿ ನಿಮ್ಮ ಪಾತ್ರ ಏನು? ನೀವು ಪಾಲುದಾರರಾ ಎಂದು ಕೇಳಿದ್ದಕ್ಕೆ ನಾನು ಪಾಲುದಾರಳಾಗಿ ಇಲ್ಲ. ಅಪ್ಪ ಮಾಡಿರಬಹುದು ಅದರ ಬಗ್ಗೆ ಗೊತ್ತಿಲ್ಲ ನಾನು ಅಲ್ಲಿ ಟ್ರಸ್ಟಿಯಾಗಿ ಇದ್ದೇನೆ ಎಂದು ಉತ್ತರ ನೀಡಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಇದನ್ನು ಓದಿ: ಇಡಿ ವಶದಲ್ಲಿದೆ ಸೋಲಾರ್ ಪವರ್ ಪ್ಲಾಂಟ್ ದಾಖಲೆ- ಟ್ರಬಲ್ ಶೂಟರ್‌ಗೆ ಹೆಚ್ಚಾದ ಸಂಕಷ್ಟ
ಟ್ರಸ್ಟಿ ಎಂದರೆ ಏನು? ನಿಮ್ಮ ಕೆಲಸ ಏನಿರುತ್ತದೆ ಎಂದಿದ್ದಕ್ಕೆ ಇಡೀ ಕಾಲೇಜಿನ ಬಗ್ಗೆ ಶಿಕ್ಷಣ ಟ್ರಸ್ಟ್ ಅಂತ ಮಾಡಲಾಗಿದೆ. ಅದರಲ್ಲಿ ನಾನು ಒಬ್ಬಳು ಟ್ರಸ್ಟಿ ಅಷ್ಟೇ. ಸಲಹೆ ಸೂಚನೆಗಳನ್ನು ಕೊಡಲಾಗುತ್ತದೆ ಎಂದು ಉತ್ತರಿಸಿದ್ದರು. ಕಾಲೇಜಿನ ಹಣಕಾಸಿನ ವ್ಯವಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಾವು ಮಾಡಿಕೊಂಡಿರುವುದು ಎಜ್ಯುಕೇಶನ್ ಟ್ರಸ್ಟ್ ಅಂತ ಅಲ್ಲಿ ಹಣಕಾಸಿನ ವ್ಯವಹಾರ ಬರುವುದಿಲ್ಲ ಎಂದು ಹೇಳಿದ್ದರು. ಕೋರ್ಸ್ ಗಳಿಗೆ ಶುಲ್ಕ ನಿಗದಿಯನ್ನು ನಿಮ್ಮ ಟ್ರಸ್ಟ್ ಮಾಡುತ್ತಾ ಎಂದು ಕೇಳಿದ್ದಕ್ಕೆ ನಾವು ಬೇರೆ ಬೇರೆ ಕಾಲೇಜಿನ ಮಾಹಿತಿ ಹೇಳ್ತೀವಿ. ಶುಲ್ಕ ನಿಗದಿ ಮಾಡುವುದು ನಿರ್ದೇಶಕರು ಎಂಬುದಾಗಿ ಉತ್ತರ ನೀಡಿದ್ದರು.