ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು (Illegal Betting Apps) ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್ (Prakash Raj) ಸೇರಿದಂತೆ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್ ನೀಡಿದೆ.
ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಕೊಟ್ಟಿದೆ. ಇದನ್ನೂ ಓದಿ: GST ನೋಟಿಸ್; ರಾಜ್ಯ ದಿವಾಳಿಯಾದಾಗ, ಬೇಕರಿ ಎಟಿಎಂ ಆಗುತ್ತದೆ- ನಿಖಿಲ್ ಕುಮಾರಸ್ವಾಮಿ
ಜು.23 ರಂದು ರಾಣಾ ದಗ್ಗುಬಾಟಿ, ಜು.30 ರಂದು ಪ್ರಕಾಶ್ ರಾಜ್ ಹಾಜರಾಗುವಂತೆ ಸೂಚಿಸಲಾಗಿದೆ. ಆ.6 ರಂದು ವಿಜಯ್ ದೇವರಕೊಂಡ ಅವರನ್ನು ವಿಚಾರಣೆಗೆ ಹಾಜರುಪಡಿಸಲಾಗಿದ್ದು, ಆ.13 ರಂದು ಲಕ್ಷ್ಮಿ ಮಂಚು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಾಜ್ಯ ಪೊಲೀಸರು ದಾಖಲಿಸಿರುವ ಕನಿಷ್ಠ ಐದು ಎಫ್‌ಐಆರ್‌ಗಳ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾಳೆ ದರ್ಶನ್ ಪಾಲಿಗೆ ಬಿಗ್ ಡೇ – ಸುಪ್ರೀಂ ಕೋರ್ಟ್ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?
ಅನಧಿಕೃತ ಜೂಜಾಟ ಕಾರ್ಯಾಚರಣೆಗಳ ಮೂಲಕ ಕೋಟ್ಯಂತರ ರೂ. ಅಕ್ರಮ ಆದಾಯವನ್ನು ಗಳಿಸುತ್ತಿರುವ ಆರೋಪ ಹೊತ್ತಿರುವ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಟಾರ್ಗೆಟ್ ಮಾಡಲಾಗಿದೆ.
ಇಡಿ ಪ್ರಕರಣದಲ್ಲಿ ಒಟ್ಟು 29 ಸೆಲೆಬ್ರಿಟಿಗಳನ್ನು ಹೆಸರಿಸಲಾಗಿದೆ. ಅವರಲ್ಲಿ ಚಲನಚಿತ್ರ ವ್ಯಕ್ತಿಗಳಾದ ನಿಧಿ ಅಗರ್ವಾಲ್, ಪ್ರಣೀತಾ ಸುಭಾಷ್, ಅನನ್ಯಾ ನಾಗಲ್ಲ ಮತ್ತು ಟಿವಿ ನಿರೂಪಕಿ ಶ್ರೀಮುಖಿ ಸೇರಿದಂತೆ ಪ್ರಭಾವಿಗಳೂ ಇದ್ದಾರೆ.