ಮಂಡ್ಯ: ಚಿನ್ನ ಸೇರಿದಂತೆ ಹಲವು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಐಶ್ವರ್ಯ ಗೌಡಗೆ (Aishwarya Gowda) ಇದೀಗ ಇಡಿ ಶಾಕ್ (ED Raid) ನೀಡಿದೆ. ಮಂಡ್ಯದ (Mandya) ನಿವಾಸಕ್ಕೆ ಬೆಳ್ಳಂಬೆಳಗ್ಗೆ ಎಂಟ್ರಿಕೊಟ್ಟ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಹಲವು ಮಹತ್ವದ ದಾಖಲೆ ವಸಪಡಿಸಿಕೊಂಡಿದ್ದಾರೆ.
ಐಶ್ವರ್ಯಗೌಡ ಹೆಸರು ಕೆಲದಿನಗಳಿಂದ ರಾಜ್ಯದ್ಯಂತ ಬಾರಿ ಸದ್ದು ಮಾಡುತ್ತಿದೆ. ಚಿನ್ನ ವಂಚನೆ ಪ್ರಕರಣದಿಂದ ಹೊರ ಬಂದ ಈ ಹೆಸರು ರಾಜಕಾರಣಿಗಳು ಹಾಗೂ ಸಿನಿಮಾ ನಟರ ಬುಡವನ್ನ ಅಲ್ಲಾಡಿಸಿತ್ತು. ಅದಾದ ಬಳಿಕ ಈಕೆಯ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇದೇ ವಿಚಾರ ಇಟ್ಟುಕೊಂಡು ಇದೀಗ ಇಡಿ ಕೂಡ ಈಕೆಯ ಬೆನ್ನು ಬಿದ್ದಿದೆ.ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ ಪೂರ್ಣ ಬೆಂಬಲ ಇದೆ: ರಾಹುಲ್ ಗಾಂಧಿ
ಇಂದು ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲಿನಲ್ಲಿರುವ ಐಶ್ವರ್ಯಗೌಡ ನಿವಾಸಕ್ಕೆ ಐವರು ಇಡಿ ಅಧಿಕಾರಿಗಳ ತಂಡ ಎರಡು ಕಾರಿನಲ್ಲಿ ಬಂದು ದಾಳಿ ನಡೆಸಿದೆ. ಭದ್ರತೆಗೆ ಸಿಆರ್‌ಪಿಎಫ್ ಯೋಧರನ್ನ ಕರೆತಂದು ಇಡೀ ಮನೆ ತಲಾಶ್ ಮಾಡಿದ್ದಾರೆ.
ಚಿನ್ನ ವಂಚನೆ, ಮನಿ ಡಬ್ಲಿಂಗ್, ಸೈಟ್ ವಂಚನೆ ಸೇರಿ ಐಶ್ವರ್ಯಗೌಡ ಮೇಲೆ ಹಲವು ಆರೋಪಗಳಿವೆ. ಈ ಎಲ್ಲಾ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿರುವ ಕಾರಣ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಷ್ಟೇ ಅಲ್ಲದೆ ಈಕೆಗೆ ಹಲವು ರಾಜಕಾರಣಿ ಹಾಗೂ ಸಿನಿಮಾ ನಟರ ಸಂಪರ್ಕ ಇದೆ ಎನ್ನುವ ಆರೋಪ ಇರುವ ಕಾರಣ, ಐಶ್ವರ್ಯ ಗೌಡಳ ವ್ಯವಹಾರದ ಇಂಚಿಂಚು ಮಾಹಿತಿಯನ್ನು ಇಡಿ ಅಧಿಕಾರಿಗಳು ಕಲೆಯಾಕಿದ್ದು, ದಾಳಿ ವೇಳೆ ಹಲವು ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.
ಸದ್ಯ ಇಡಿ ಅಧಿಕಾರಿಗಳು ದಾಳಿ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಭಾರತ-ಪಾಕ್ ನಡುವೆ ಉದ್ವಿಗ್ನತೆ – ʻಆಕ್ರಮಣ್ʼ ಹೆಸರಲ್ಲಿ ಭಾರತ ಸಮರಾಭ್ಯಾಸ