ಮಂಗಳೂರು: ಉದ್ಯಮಿಗಳಿಗೆ ಸಾಲ (Loan) ಕೊಡಿಸೋದಾಗಿ ಕೋಟಿ ಕೋಟಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ರೋಷನ್ ಸಲ್ಡಾನ 2.85 ಕೋಟಿ ರೂ. ಮೌಲ್ಯದ ಆಸ್ತಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮಂಗಳೂರು (Mangaluru) ಉಪವಲಯ ಕಚೇರಿ ಅಧಿಕಾರಿಗಳು ರೋಷನ್ ಸಲ್ಡಾನ (Roshan Saldanha) ಮನೆ ಮತ್ತು ಬ್ಯಾಂಕ್ ಖಾತೆ ಸೇರಿ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತತ್ಕಾಲಿಕ ಮುಟ್ಟುಗೋಲು ಹಾಕಿದ್ದಾರೆ. ರೋಷನ್ ಸಲ್ಡಾನ ಕೋಟಿಗಟ್ಟಲೆ ಸಾಲ ಕೊಡಿಸುವ ಆಮಿಷವೊಡ್ಡಿ ದೇಶದ ಐಷಾರಾಮಿ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಹಣ ವಂಚನೆ ಮಾಡಿದ್ದ. ಇದನ್ನೂ ಓದಿ: ED ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ ಪತ್ತೆ – ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್
ಈ ಸಂಬಂಧ ರೋಷನ್ ಸಲ್ಡಾನ, ಆತನ ಪತ್ನಿ ಢಫ್ನಿನೀತು ಹಾಗೂ ಇತರರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಈ ಹಿಂದೆ ಸುಮಾರು 9.5 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇನ್ನೂ ಆತನ ಐಷಾರಾಮಿ ಬಂಗಲೆಯನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದರು.
ನೂರಾರು ಕೋಟಿ ಸಾಲ ಕೊಡಿಸುವುದಾಗಿ ಐದರಿಂದ ಹತ್ತು ಕೋಟಿ ರೂ. ಮುಂಗಡ ಹಣ ಪಡೆದು ರೋಷನ್ ಸಲ್ಡಾನ ಮೋಸ ಮಾಡುತ್ತಿದ್ದ. ಈ ಸಂಬಂಧ ಇಬ್ಬರು ಉದ್ಯಮಿಗಳು ನೀಡಿದ್ದ ದೂರಿನ ಆಧಾರದಲ್ಲಿ ಕಳೆದ ಜು.17 ರಂದು ರೋಷನ್ ಸಲ್ಡಾನನನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ; `ಕೈʼ ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿ ED ವಶಕ್ಕೆ

