– ಭಿನ್ನಮತವನ್ನು ಹೈಕಮಾಂಡ್ ಸರಿ ಮಾಡುತ್ತೆ
ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 300 ಕೋಟಿ ಮೌಲ್ಯ ಆಸ್ತಿ ಜಪ್ತಿ ಮಾಡಿದೆ. ಕೂಡಲೇ ಈ ಪ್ರಕರಣವನ್ನ ಸಿಬಿಐಗೆ (CBI) ವಹಿಸಬೇಕು ಎಂದು ವಿಪಕ್ಷ ನಾಯಕ ಅಶೋಕ್ (Ashok) ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು , ಮುಡಾ ಹಗರಣ ಬಗೆದಷ್ಟು ಹೊರಗೆ ಬರುತ್ತಿದೆ. ನಾನು ಅರ್ಜಿ ಹಾಕಿ ಎರಡು ತಿಂಗಳು ಆದರೂ 50:50 ಅಡಿ ಎಷ್ಟು ಸೈಟ್ ಕೊಟ್ಟಿದ್ದೀರಾ ಅಂತ ಮುಡಾ ಇನ್ನು ಮಾಹಿತಿ ಕೊಟ್ಟಿಲ್ಲ.ಇದೆಲ್ಲವನ್ನು ನೋಡಿದರೆ ಲೋಕಾಯುಕ್ತಗೆ ಈ ಕೇಸ್ ತನಿಖೆ ಮಾಡೋಕೆ ಆಸಕ್ತಿ ಇದ್ದಂತೆ ಕಾಣ್ತಿಲ್ಲ. ಲೋಕಾಯುಕ್ತದವರು ಮುಡಾ ಕೇಸ್ ನಲ್ಲಿ ಕ್ಲೀನ್ ಚಿಟ್ ಕೊಡೋ ಪ್ರಯತ್ನ ಮಾಡ್ತಿದ್ದಾರೆ ಅನ್ನಿಸುತ್ತೆ ಅಂತ ಆರೋಪ ಮಾಡಿದರು. ಇದನ್ನೂ ಓದಿ: MUDA ಅಕ್ರಮದಲ್ಲಿ ʼಕೋಕನಟ್ʼ ಡೀಲ್ – 50, 100 ಕೋಕನಟ್ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್
ಇಡಿ ಲೋಕಾಯುಕ್ತಗೆ ದಾಖಲೆಗಳನ್ನು ಕೊಟ್ಟರೂ ಅದನ್ನ ಬಳಸಿಕೊಳ್ಳಲಿಲ್ಲ. ಲೋಕಾಯುಕ್ತ ಕೂಡಾ ಇಡಿ ರೀತಿ ಸೀಜ್ ಮಾಡಿಲ್ಲ ಯಾಕೆ? ಇದೆಲ್ಲವನ್ನೂ ನೋಡಿದರೆ ಲೋಕಾಯುಕ್ತ ಪೊಲೀಸರು ಪ್ರಮೋಷನ್ ಪಡೆಯೋಕೆ ಹೀಗೆಲ್ಲ ಮಾಡ್ತಿದ್ದಾರೆ ಅಂತ ಅನ್ನಿಸುತ್ತೆ. ಲೋಕಾಯುಕ್ತಗೆ ಯಾರ ಒತ್ತಡ ಇದೆ. ಯಾರ ಕೈವಾಡ ಇದೆ ಗೊತ್ತಿಲ್ಲ.ಮೊದಲ ದಿನದಿಂದಲೂ ನಾವು ಇದನ್ನೇ ಹೇಳ್ತಿದ್ದೇವೆ.ಹೀಗಾಗಿ ನಾವು ಮುಡಾ ಕೇಸ್ ಅನ್ನ ಸಿಬಿಐ ತನಿಖೆಗೆ ಕೊಡಿ ಅಂತ ಹೇಳ್ತಿದ್ದೇವೆ. ಈಗಲೂ ಮುಡಾ ಕೇಸ್ ಅನ್ನ ಸಿಬಿಐಗೆ ಕೊಡಬೇಕು ಅಂತ ಅಶೋಕ್ ಅಗ್ರಹ ಮಾಡಿದ್ರು. ಇದನ್ನೂ ಓದಿ: MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?
ವಿಧಾನಸೌಧದಲ್ಲಿ ಯತ್ನಾಳ್ ಟೀಂ ಮತ್ತು ರೇಣುಕಾಚಾರ್ಯ ಟೀಂಗಳಿಂದ ಪದೇ ಪದೇ ಸಭೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಆಂತರಿಕ ಕಿತ್ತಾಟ ಎಲ್ಲವನ್ನು ಪಾರ್ಟಿ ನೋಡಿಕೊಳ್ಳುತ್ತೆ.ನಾನು ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ. ಯಡಿಯೂರಪ್ಪ, ಅನಂತ್ ಕುಮಾರ್, ನಾವೆಲ್ಲ ಪಾರ್ಟಿ ಕಟ್ಟಿ ಬೆಳೆಸಿದ್ದೇವೆ. ಪಾರ್ಟಿಗೆ ಸಂಬಂಧಿಸಿದ ವಿಷಯ ಇದ್ದರೆ ನಾಲ್ಕು ಗೋಡೆ ಮಧ್ಯೆ ಮಾತಾಡ್ತೀವಿ. ನಮ್ಮದು ಕೇಡರ್ ಪಾರ್ಟ್. ಭಿನ್ನಮತದ ವಿಚಾರಗಳನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ ಅಂತ ತಿಳಿಸಿದರು.
ಇನ್ನು ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆಗೆ ಯತ್ನಾಳ್ ಟೀಂನಿಂದ ಸ್ಪರ್ಧೆ ಮಾಡೋ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಪ್ರತಿಕ್ರಿಯೆ ಇನ್ನು ಶುರುವಾಗಿಲ್ಲ. ಚುನಾವಣೆ ಘೋಷಣೆ ಆಗಿಲ್ಲ ಅಂದ ಮೇಲೆ ಏನು ಪ್ರತಿಕ್ರಿಯೆ ಕೊಡಲಿ. ಇನ್ನು ತಾಲೂಕು ಮಟ್ಟದಲ್ಲಿ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ. ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಬಂದಾಗ ಅದರ ಬಗ್ಗೆ ಮಾತಾಡ್ತೀನಿ ಅಂತ ಜಾರಿಕೊಂಡರು.