– 18 ಗಂಟೆಗೂ ಹೆಚ್ಚು ಕಾಲ ದಾಖಲೆ ಪರಿಶೀಲನೆ
ಶಿವಮೊಗ್ಗ: ಸಾಗರದ ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ (Congress) ಮುಖಂಡ ಟಿಪ್ ಟಾಪ್ ಬಷೀರ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ (ED Raids) ನಡೆಸಿದ್ದಾರೆ.
ಸಾಗರದ (Sagar) ಕೆಳದಿ ರಸ್ತೆಯಲ್ಲಿರುವ ಬಷೀರ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. 7 ಅಧಿಕಾರಿಗಳ ನೇತೃತ್ವದ ತಂಡ ಸತತ 18 ಗಂಟೆಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಅಲ್ಲದೇ ಅಧಿಕಾರಿಗಳು ಉದ್ಯಮಿಯನ್ನು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಕಾಂತ್ ಶೆಟ್ಟಿಗೆ 3 ತಿಂಗಳು ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಟಿಪ್ ಟಾಪ್ ಬಷೀರ್ ಅವರು ನಗರಸಭಾ ಸದಸ್ಯರಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಯಾರೇ ದ್ವೇಷ ಭಾಷಣ ಮಾಡಿದ್ರು ಸರ್ಕಾರ ಸುಮ್ಮನೆ ಇರಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್