ರಾಂಚಿ: ಲೋಕಸಭಾ ಚುನಾವಣೆಯ ಸಮಯದಲ್ಲೇ ಜಾರಿ ನಿರ್ದೇಶನಾಲಯ (ED) ದೊಡ್ಡ ಬೇಟೆಯಾಡಿದೆ. ರಾಂಚಿಯ (Ranchi) ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಕಂತೆ ಕಂತೆ ನೋಟುಗಳನ್ನು ಪತ್ತೆ ಮಾಡಿದೆ.
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ,(Jharkhand Rural Development Minister) ಕಾಂಗ್ರೆಸ್ ನಾಯಕ ಆಲಂಗೀರ್ ಆಲಂ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಕೆಲಸಗಾರನ ಮನೆಯಲ್ಲಿದ್ದ ಸುಮಾರು 20 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.
Advertisement
ಬ್ಯಾಗ್, ಕಮೋಡ್ಗಳಲ್ಲಿ ಹಣವನ್ನು ಸಂಗ್ರಹಿಸಲಾಗಿತ್ತು. ಹಣ ಎಣಿಕೆ ಕಾರ್ಯ ನಡೆಯುತ್ತಿದೆ. ಸದ್ಯ ಇಡಿ ತನಿಖೆ ನಡೆಸುತ್ತಿರುವ ವೀರೇಂದ್ರ ಕೆ ರಾಮ್ ಪ್ರಕರಣದ ಹಣ ಇದಾಗಿದೆ ಎಂದು ಇಡಿ ಹೇಳಿದೆ. ಇದನ್ನೂ ಓದಿ: ಇಸ್ರೇಲ್ನಲ್ಲಿ ಅಲ್ ಜಜೀರಾ ಬಂದ್ – ಕಚೇರಿ ಮೇಲೆ ದಾಳಿ
Advertisement
#WATCH | The Enforcement Directorate is conducting raids at multiple locations in Ranchi. Huge amount of cash recovered from household help of Sanjiv Lal – PS to Jharkhand Rural Development minister Alamgir Alam, in Virendra Ram case.
ED arrested Virendra K. Ram, the chief… pic.twitter.com/VTpUKBOPE7
— ANI (@ANI) May 6, 2024
Advertisement
ಜಾರ್ಖಂಡ್ನಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದ ವೀರೇಂದ್ರ ಕೆ ರಾಮ್ ಅವರು 100 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ ಆರೋಪ ಬಂದಿದೆ.
Advertisement
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿದ್ದ ವೀರೇಂದ್ರ ಕೆ ರಾಮ್ ಅವರನ್ನು ಫೆಬ್ರವರಿ 2023 ರಲ್ಲಿ ಇಡಿ ಬಂಧಿಸಿತ್ತು. ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮ ಎಸಗಲು ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಇಡಿ ಬಂಧಿಸಿತ್ತು. ಇದನ್ನೂ ಓದಿ: ಗುಂಡಿಕ್ಕಿ ಈಕ್ವೆಡಾರ್ ಬ್ಯೂಟಿ ಹತ್ಯೆ – ಇನ್ಸ್ಟಾಗ್ರಾಮ್ ಫಾಲೋ ಮಾಡಿ ಸ್ಕೆಚ್ ಹಾಕಿದ್ದ ಹಂತಕರು!
ಜಾರ್ಖಂಡ್ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿದ್ದ ಪೆನ್ಡ್ರೈವ್ ಅನ್ನು ವೀರೇಂದ್ರ ಕೆ ರಾಮ್ನಿಂದ ಬಳಿಯಿಂದ ಇಡಿ ಪಡೆದುಕೊಂಡಿದೆ.