‘ಕೈ’ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇ.ಡಿ ದಾಳಿ – ಆರು ಐಷಾರಾಮಿ ಕಾರುಗಳು ವಶಕ್ಕೆ

Public TV
2 Min Read
KC Veerendra Pappi ED Raid

ಚಿತ್ರದುರ್ಗ: ಇ.ಡಿ (ED) ವಶದಲ್ಲಿರುವ ಚಿತ್ರದುರ್ಗದ (Chitradurga) ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ (KC Veerendra Pappi) ಮನೆ ಮೇಲೆ ಇಡಿ ಅಧಿಕಾರಿಗಳು ಮತ್ತೆ ಇಂದು ದಾಳಿಯನ್ನು ನಡೆಸಿದ್ದು, 6 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಶಾಸಕ ಕೆ.ಸಿ. ವೀರೇಂದ್ರ ಹೇಳಿಕೆ ಆಧರಿಸಿ ಅವರ ಮನೆ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಆರು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅವರ ಮನೆಯಲ್ಲಿರುವ ಐಶಾರಾಮಿ ಕಾರುಗಳ ಬಗ್ಗೆ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಮನೆ ಮಾತ್ರವಲ್ಲದೇ ಶಾಸಕ ವೀರೇಂದ್ರ ಪಪ್ಪಿಯ ಬ್ಯಾಂಕ್ ಖಾತೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಸಂತಾನಹರಣ ಚಿಕಿತ್ಸೆ ವೇಳೆ ತಾಯಿ ಸಾವು – ಅನಸ್ತೇಶಿಯಾ ನೀಡದೇ ಶಸ್ತ್ರಚಿಕಿತ್ಸೆ ಮಾಡಿದ್ದಾಗಿ ಕುಟುಂಬಸ್ಥರ ಆರೋಪ

veerendra puppy 2 1

ಚಳ್ಳಕೆರೆ ನಗರದ ಕೋಟೆಕ್ ಮಹೇಂದ್ರ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್‌ಗೆ ಇ.ಡಿ ಅಧಿಕಾರಿಗಳು ತೆರಳಿದ್ದರು. ಆ ಬ್ಯಾಂಕ್‌ನಲ್ಲಿ ವೀರೇಂದ್ರ ಪಪ್ಪಿ ಹಾಗೂ ಅವರ ಕುಟುಂಬ ಸದಸ್ಯರ ಹಣ ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನ ಕೂಡ ಕಲೆ ಹಾಕಿದ್ದು, 17 ಬ್ಯಾಂಕ್ ಖಾತೆಗಳ ಮೂಲಕ ಆಗಿರುವ ಹಣಕಾಸು ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಬೆಟ್ಟಿಂಗ್ (Online Betting) ಆಪ್‌ಗಳ ಮೂಲಕ ಗಳಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುವ ಮೂಲಕ ಅಕ್ರಮ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ʻಕೈʼ ಶಾಸಕ ವಿರೇಂದ್ರ ಪಪ್ಪಿ ಮತ್ತೆ 6 ದಿನ ಇಡಿ ಕಸ್ಟಡಿಗೆ

ಆಗಸ್ಟ್ 22ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ಪಪ್ಪಿ ನಿವಾಸ ಮೇಲೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಮಧ್ಯರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಅಂದು ಪಪ್ಪಿ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆ ಚಿನ್ನಾಭರಣ ವಿದೇಶಿ ಕರೆನ್ಸಿಯನ್ನ ಇಡಿ ವಶಕ್ಕೆ ಪಡೆದಿತ್ತು. ಇದನ್ನೂ ಓದಿ: ED ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ ಪತ್ತೆ – ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್

ಸತತ 18 ಗಂಟೆಗೂ ಹೆಚ್ಚು ಕಾಲ ಇಡಿ ಅಧಿಕಾರಿಗಳು ಪಪ್ಪಿ ಕೋಟೆಯನ್ನು ಜಾಲಾಡಿದ್ದರು. ಈ ವೇಳೆ 1 ಕೋಟಿ ರೂ ವಿದೇಶಿ ಕರೆನ್ಸಿ ಸೇರಿದಂತೆ ಸುಮಾರು 12 ಕೋಟಿ ರೂ ನಗದು ಪತ್ತೆ ಆಗಿತ್ತು. 6 ಕೋಟಿ ರೂ. ಮೌಲ್ಯದ ಚಿನ್ನ, ಸುಮಾರು 10 ಕೆಜಿ ಬೆಳ್ಳಿ, 4 ವಾಹನಗಳು, 17 ಬ್ಯಾಂಕ್ ಅಕೌಂಟ್ಸ್ ಮತ್ತು 2 ಲಾಕರ್ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ

Share This Article