50 ಕೋಟಿಗೆ ನಾಯಿ ಖರೀದಿ ಮಾಡಿದ್ದೇನೆ ಅಂತಿದ್ದ ಸತೀಶ್ ಮನೆ ಮೇಲೆ ಇಡಿ ದಾಳಿ – ಬಯಲಾಯ್ತು ಸತ್ಯ

Public TV
2 Min Read
Caucasian Shepherd

ಬೆಂಗಳೂರು: 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ಶ್ವಾನ ನಾಯಿಯೊಂದನ್ನು ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್‌ (Bengaluru Dog Breeder Satish) ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 

View this post on Instagram

 

A post shared by Satish S (@satishcadaboms)

ಸತೀಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ (ED) ಅಧಿಕಾರಿಗಳು ಇಂದು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಅನ್ನೋದು ಸುಳ್ಳು ಎಂಬುದು ಗೊತ್ತಾಗಿದೆ. ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳಿ ಪರಿಶೀಲನೆ ಮುಂದುವರಿಸಿದ್ದಾರೆ.

ಸತೀಶ್‌ 50 ಕೋಟಿ ರೂ. ಕೊಟ್ಟು ಶ್ವಾನವೊಂದನ್ನು ಖರೀದಿ ಮಾಡಿರುವಿದಾಗಿ ಹೇಳಿಕೊಂಡಿದ್ದರು. ಕಾಡು ತೋಳ ಮತತ್ತು ಕಕೇಶಿಯನ್‌ ಶೆಫರ್ಡ್‌ ತಳಿಯ ಮಿಶ್ರಣವಾಗಿರುವ ಇದನ್ನು ತೋಳನಾಯಿ ಎಂದೂ ಕರೆಯುತ್ತಾರೆ. ಇದನ್ನೂ ಓದಿ: ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದೀರಿ: ವಿಜಯ್‌ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಜಮಾತ್‌

Caucasian Shepherd 2

ಸತೀಶ್‌ ಯಾರು?
ಸತೀಶ್‌ ಬೆಂಗಳೂರಿನ ಶ್ವಾನಪ್ರಿಯರಲ್ಲಿ ಒಬ್ಬರು. ಇವರು ಹಲವು ಶ್ವಾನ ತಳಿ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನಕ್ಕೆ ಬರುತ್ತಿರುತ್ತಾರೆ. ಅಲ್ಲದೇ ಸತೀಶ್‌ ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಅಪರೂಪದ ಶ್ವಾನದೊಂದಿಗೆ ಹೋದ್ರೆ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಇದನ್ನೂ ಓದಿ: ಕಿವಿ ಕೇಳದ, ಮಾತು ಬಾರದ 11ರ ಬಾಲಕಿ ಮೇಲೆ ರೇಪ್‌ – ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

ಕಕೇಷ್ಯನ್ ಶೆಫರ್ಡ್ ವಿಶೇಷತೆ ಏನು?
`ಕ್ಯಾಡಾಬೊಮ್ಸ್ ಹೇಡರ್’ ಹೆಸರಿನ ಕಕೇಷ್ಯನ್ ಶೆಫರ್ಡ್ (Caucasian Shepherd) ಶ್ವಾನವು ಬರೋಬ್ಬರಿ 100 ಕೆ.ಜಿ ತೂಕವಿದೆ. ನೋಡಲು ಸಿಂಹದಂತೆಯೇ ಕಾಣುವ ಈ ಶ್ವಾನದ ತಲೆಬುರುಡೆ ಗಾತ್ರವು 38 ಇಂಚುಗಳಿದ್ದು, ಭುಜಗಳು 34 ಇಂಚುಗಳಿವೆ. ಅಲ್ಲದೇ ಶ್ವಾನದ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ.

ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರ ಮಧ್ಯೆ ಇರುವ ಕಕೇಷ್ಯಾ ಪ್ರಾಂತ್ಯದ ಬಳಿ ಇರುವ ಕಕೇಷಿಯನ್ ಶೆಫರ್ಡ್ ಶ್ವಾನವನ್ನು (Caucasian Shepherd Dog) ಜಾನುವಾರುಗಳ ರಕ್ಷಣೆಗೆ ನೋಡಿಕೊಳ್ಳಲು ಸಾಕುತ್ತಾರೆ. ಈ ತಳಿಯ ಶ್ವಾನವು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ಮತ್ತು ಡಾಗೆಸ್ತಾನ್ ದೇಶಗಳಲ್ಲಿ ಕಾಣಸಿಗುತ್ತವೆ. ಭಾರತ ದೇಶದಲ್ಲಿ ನೋಡಲು ಸಿಗೋದು ಅಪರೂಪ ಎಂದು ಸತೀಶ್ ಈ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಟ್ರು ರಂಜನಿ ರಾಘವನ್

Share This Article