ಶ್ರೀನಗರ: 2021ರಲ್ಲಿ ನಡೆದ ಜೆ&ಕೆ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಪ್ರಶ್ನಿಸಿದೆ.
ಜೆ&ಕೆ ಬ್ಯಾಂಕ್ ಹಗರಣ ಕುರಿತಂತೆ 2021ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜಾರಿ ನಿರ್ದೇಶನಾಲಯ ಒಮರ್ ಅಬ್ದುಲ್ಲಾ ಅವರನ್ನು ಪ್ರಶ್ನಿಸಿದೆ.
Advertisement
ಪ್ರಕರಣ ಏನು?
ಜೆ&ಕೆ ಬ್ಯಾಂಕ್‌ನ ಬಳಕೆಗಾಗಿ ಮುಂಬೈನ ಬಾಂದ್ರಾ ಕುರ್ಲಾ ಕಂಪ್ಲೆಕ್ಸ್ನಲ್ಲಿ ಹೆಚ್ಚಿನ ಬೆಲೆಯ ಆಸ್ತಿಯನ್ನು ಖರೀದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು 180 ಕೋಟಿ ರೂ. ವಂಚನೆ ಮಾಡಿರುವುದಾಗಿ ಸಿಬಿಐ ಜೆ&ಕೆ ಬ್ಯಾಂಕ್‌ನ ಅಂದಿನ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಇದನ್ನೂ ಓದಿ: ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್
Advertisement
Advertisement
ಮುಂಬೈ ಮೂಲದ ಬ್ಯಾಂಕ್ ನಿರ್ದೇಶಕ ನಿಹಾಲ್ ಚಂದ್ರಕಾಂತ್ ಗರ್ವಾರೆ ಈ ವ್ಯವಹಾರದಲ್ಲಿ ಮುಖ್ಯ ಪಾತ್ರ ವಹಿಸಿದ್ದು, ಬ್ಯಾಂಕ್‌ನಿಂದ ಕೋಟ್ಯಂತರ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗರ್ವಾರೆ ಅವರನ್ನು ಇತ್ತೀಚೆಗೆ ಬಂಧಿಸಲಾಯಿತು. ಇದನ್ನೂ ಓದಿ: ಎಲ್ಲ PIL ಗಳನ್ನು ನಾವೇ ವಿಚಾರಣೆ ನಡೆಸುವುದಾದರೆ ಜನ ಸರ್ಕಾರವನ್ನು ಆಯ್ಕೆ ಮಾಡಿರುವುದ್ಯಾಕೆ? – ಸುಪ್ರೀಂಕೋರ್ಟ್ ಗರಂ
Advertisement
ನಿಹಾಲ್ ಚಂದ್ರಕಾಂತ್ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಈ ಕೇಸ್‌ನಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಇದೀಗ ಇಡಿ ಒಮರ್ ಅವರನ್ನು ಪ್ರಶ್ನಿಸಿದೆ.