ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಅಭಿಷೇಕ್ ಬ್ಯಾನರ್ಜಿ ಪತ್ನಿ ರೂಜಿರಾ ಅವರಿಗೂ ನೋಟಿಸ್ ನೀಡಲಾಗಿದೆ.
ಸೆಪ್ಟೆಂಬರ್ 3ರಂದು ಬ್ಯಾಂಕ್ ದಾಖಲೆಗಳ ಜೊತೆ ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ್ ಬ್ಯಾನರ್ಜಿ ಅವರಿಗೆ ಇಡಿ ಸೂಚಿಸಿದೆ. ಅದೇ ರೀತಿ ಪತ್ನಿ ರೂಜಿರಾ ಅವರಿಗೆ ಸೆಪ್ಟೆಂಬರ್ 1ರಂದು ವಿಚಾರಣೆಗೆ ದಿನಾಂಕ ನೀಡಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಖಾತೆಗೆ ಇಬ್ಬರು ತಮ್ಮ ಕಂಪನಿಯಿಂದ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆ ಕೇಂದ್ರಿಯ ತನಿಖಾ ಸಂಸ್ಥೆ ಎಫ್‍ಐಆರ್ ದಾಖಲಿಸಿತ್ತು. ನಂತರ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಸಹ ಪ್ರಕರಣ ದಾಖಲಿಸಿತ್ತು. ಇದನ್ನೂ ಓದಿ: ದೇಶದ ಆಸ್ತಿ ಬಿಜೆಪಿ, ಮೋದಿಯ ಸ್ವಂತದ್ದಲ್ಲ: ಮಮತಾ ಬ್ಯಾನರ್ಜಿ
Advertisement
Advertisement
ಹಣ ವರ್ಗಾವಣೆ ಬದಲಾಗಿ ಕಂಪನಿ ಜೊತೆ ನಕಲಿ ಒಪ್ಪಂದಗಳನ್ನ ಮಾಡಿಕೊಂಡಿರುವ ಆರೋಪಗಳು ಅಭಿಷೇಕ್ ಬ್ಯಾನರ್ಜಿ ಅವರ ಮೇಲಿದೆ. ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಜೊತೆಗೆ ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಹ ಆಗಿದ್ದಾರೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ – ಸಿಎಂ ಮಮತಾ ಬ್ಯಾನರ್ಜಿ 9 ಪ್ರಶ್ನೆಗಳಿಗೆ ಕೇಂದ್ರದ ಉತ್ತರ