ಮುಂಬೈ: ಭೂಗತ ಜಗತ್ತಿನ ದೊರೆಗಳಾದ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ, ಎನ್‍ಸಿಪಿ ನಾಯಕ ನವಾಬ್ ಮಲಿಕ್‍ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
Advertisement
ಅಂಡರ್ ವಲ್ಡ್ ಕೃತ್ಯಗಳಿಗೆ ನೆರವಾಗುವಂತೆ ಅಕ್ರಮ ಹಣ ವರ್ಗಾವಣೆ ಆರೋಪ ನವಾಬ್ ಮಲಿಕ್ ಮೇಲೆ ಕೇಳಿ ಬಂದಿತ್ತು. ಬಳಿಕ ಇಡಿ ನವಾಬ್ ಮಲಿಕ್‍ರನ್ನು ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಅರೆಸ್ಟ್ ಮಾಡಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ತನಿಖೆ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಹಣ ವರ್ಗಾವಣೆಯಾಗಿರುವುದು ಸ್ಪಷ್ಟವಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಸೈಲೆಂಟ್ ಕಿಲ್ಲರ್: ಸೋಂಕಿಗೆ ತುತ್ತಾಗಿ ಅನುಭವ ಹಂಚಿಕೊಂಡ ಸುಪ್ರೀಂ ಕೋರ್ಟ್ ಸಿಜೆಐ
Advertisement
"Have been arrested, but won't be scared. We will fight and win," said NCP leader Nawab Malik after being arrested by ED in connection with Dawood Ibrahim money laundering case. pic.twitter.com/LYDdTGoOiK
— ANI (@ANI) February 23, 2022
Advertisement
ನವಾಬ್ ಮಲಿಕ್ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿಗೆ ಆಗಮಿಸಿದ್ದರು. ಇಡಿ ತನಿಖೆ ವೇಳೆ ಭೂಗತ ಪಾತಕಿಗಳೊಂದಿಗೆ ಒಡನಾಟ, ಅಕ್ರಮ ಆಸ್ತಿ ವ್ಯವಹಾರ ಮತ್ತು ಹವಾಲ ಡೀಲ್ ಬಗ್ಗೆ ಪ್ರಶ್ನೆ ಮಾಡಿದ್ದು, ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್‍ಎಲ್‍ಎ) ಅಡಿಯಲ್ಲಿ ನವಾಬ್ ಮಲಿಕ್ ಬಂಧನವಾಗಿದೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು
Advertisement
ಇಡಿ ಮತ್ತು ಕೆಲವು ಏಜೆನ್ಸಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪದೇ ಪದೇ ಆರೋಪಿಸಿದೆ.