ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ದಾಳಿಯ ವೇಳೆ ಕಪ್ಪು ಡೈರಿಯೊಂದನ್ನು ಪತ್ತೆ ಮಾಡಿದೆ.
ಇಡಿ ಮೂಲಗಳ ಪ್ರಕಾರ ಡೈರಿಯು ಪಶ್ಚಿಮ ಬಂಗಾಳ ಸರ್ಕಾರದ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಸೇರಿದ್ದಾಗಿದೆ. ಡೈರಿಯ 40 ಪುಟಗಳಲ್ಲಿ ಬರೆಯಲಾಗಿದ್ದು, ಅದರಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಲವು ರಹಸ್ಯಗಳು ಸೇರಿವೆ ಎಂದಿದೆ. ಇದನ್ನೂ ಓದಿ: ನಾನು ಮುಖ್ಯಮಂತ್ರಿ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿದ್ದೆ: ವಾಟಾಳ್ ನಾಗರಾಜ್
Advertisement
Advertisement
ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆಗೆ ಶುಕ್ರವಾರ ರಾತ್ರಿ ಇಡಿ ದಾಳಿ ನಡೆಸಿ, ಬರೋಬ್ಬರಿ 20 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿತ್ತು. ಮರುದಿನ ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ಇದನ್ನೂ ಓದಿ: ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ