ನವದೆಹಲಿ: ಕೇವಲ 16 ದಿನಗಳ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ತಮ್ಮ ವಿರುದ್ಧ ಷಡ್ಯಂತ್ರ್ಯ ನಡೆದಿದೆ. ಮತ್ತೆ ಐಟಿ, ಇಡಿ, ಸಿಬಿಐ ರೇಡ್ ಮಾಡಲಿದ್ದು, ಆಗಸ್ಟ್‍ನಲ್ಲಿ ಬಂಧಿಸಲು ಪ್ಲಾನ್ ಮಾಡಲಾಗಿದೆ ಎಂಬ ಬಾಂಬ್ ಸಿಡಿಸಿದ್ರು. ಕಾಕತಾಳೀಯ ಎಂಬಂತೆ ಎಲೆಕ್ಷನ್ ಸನಿಹದಲ್ಲಿಯೇ ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ತನಿಖೆ ಆರಂಭವಾದ 2 ವರ್ಷಗಳ ಬಳಿಕ ಇಡಿ ಚಾರ್ಜ್‍ಶೀಟ್ ಹಾಕಿರೋದು ಗಮನಾರ್ಹ. ಸದ್ಯದಲ್ಲೇ ಕೋರ್ಟ್ ಡಿಕೆಶಿಗೆ ಸಮನ್ಸ್ ಜಾರಿ ಮಾಡಲಿದ್ದು, ವಿಚಾರಣೆ ಕೂಡ ನಡೆಸುವ ಸಂಭವವಿದೆ.
Advertisement
Advertisement
ಈ ಬೆಳವಣಿಗೆಗೆ ಎಂದಿನಂತೆ ಡಿಕೆ ಶಿವಕುಮಾರ್ ಪೊಲಿಟಿಕಲ್ ಟಚ್ ನೀಡಿದ್ದಾರೆ. ಯಾರಿಂದ ಬಿಜೆಪಿಗೆ ತೊಂದರೆ ಇದೆಯೋ ಅಂತವರನ್ನು ಈ ಮೂಲಕ ದಮನ ಮಾಡೋ ಯತ್ನ ನಡೆದಿದೆ..ಒಂದು ಅವರ ಜೊತೆ ಹೋಗ್ಬೇಕು. ಇಲ್ಲ ಅಂದ್ರೆ ಅವರಿಗೆ ಶರಣಾಗಬೇಕು. ಆದ್ರೆ ನಾನು ಆ ಗುಂಪಿಗೆ ಸೇರಿಲ್ಲ. ಎಲ್ಲವನ್ನು ಎದುರಿಸ್ತೇನೆ. ನಾನು ತಪ್ಪು ಮಾಡಿಲ್ಲ ಎಂದಿದ್ದಾರೆ.
Advertisement
ಡಿಕೆ ಸುರೇಶ್ ಮಾತಾಡಿ, ಇಂದು ಕೋರ್ಟ್‍ಗಳು ಕೂಡ ಒತ್ತಡ ಎದುರಿಸುತ್ತಿವೆ. ನ್ಯಾಯ ನಿರೀಕ್ಷೆ ಸಾಧ್ಯವಿಲ್ಲ ಎಂದಿದ್ದಾರೆ. ಇದೇ ಪ್ರಕರಣದಲ್ಲಿ ಡಿಕೆ ಶಿವಕುಮಾರ್ 48 ದಿನ ತಿಹಾರ್ ಜೈಲಿನಲ್ಲಿದ್ದರು.
Advertisement
ಡಿಕೆಶಿ ವಿರುದ್ಧದ `ಚಾರ್ಜ್‍ಶೀಟ್’ ಏನು?
1. 800 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ
2. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ರೂ. ಠೇವಣಿ
3. 20 ಬ್ಯಾಂಕ್, 317 ಖಾತೆ ಮೂಲಕ ಹಣ ವರ್ಗಾವಣೆ
4. ವಿದೇಶಿ ಬ್ಯಾಂಕ್ ಖಾತೆ ಮೂಲಕ ಹಣಕಾಸು ವ್ಯವಹಾರ
5. ಪುತ್ರಿ ಹೆಸರಿನಲ್ಲಿ 108 ಕೋಟಿ ರೂ. ಅಕ್ರಮ ವ್ಯವಹಾರ
6. ಪುತ್ರಿಯ 48 ಕೋಟಿ ರೂ. ಸಾಲಕ್ಕೆ ಮೂಲ ಇಲ್ಲ
7. ದೆಹಲಿ ನಿವಾಸದಲ್ಲಿ ಸಿಕ್ಕ 8.59 ಕೋಟಿ ರೂ.ಗೆ ಲೆಕ್ಕ ಕೊಟ್ಟಿಲ್ಲ
8. ಡಿ.ಕೆ ಕುಟುಂಬ ಹೆಸರಲ್ಲಿ 300 ಆಸ್ತಿ (ಡಿಕೆಶಿ-24, ಸುರೇಶ್-27, ತಾಯಿ ಹೆಸರಲ್ಲಿ 38 ಆಸ್ತಿ)
9. 7 ವರ್ಷದಲ್ಲಿ ಕೃಷಿಯಿಂದ 120 ಕೋಟಿ ರೂ. ಆದಾಯ