ನವದೆಹಲಿ: ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಶಿಯೋಮಿ, ಜಾರಿ ನಿರ್ದೇಶನಾಲಯ(ಇಡಿ)ದ ತನಿಖೆ ವೇಳೆ ದೈಹಿಕ ಹಿಂಸೆಯ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದೆ. ಆದರೆ ಈ ಆರೋಪವನ್ನು ಇಡಿ ತಳ್ಳಿ ಹಾಕಿದೆ.
ಶಿಯೋಮಿ ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್, ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಬಿ.ಎಸ್. ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇಡಿ, ಇದು ಸುಳ್ಳು. ಆಧಾರ ರಹಿತ ಎಂದು ಹೇಳಿದೆ. ಇದನ್ನೂ ಓದಿ: ಸಾವಿರ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಮಸ್ಕ್ ಯೋಜನೆ
Advertisement
ಕಂಪನಿ ಮಾಡಿರುವ ಅಕ್ರಮ ಹಣದ ಬಗ್ಗೆ ಜಾರಿ ನಿರ್ದೇಶನಾಲಯ ಫೆಬ್ರವರಿಯಲ್ಲಿ 1999 ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಎಫ್‌ಎಎಂಎ) ಅಡಿಯಲ್ಲಿ ತನಿಖೆ ಪ್ರಾರಂಭಿಸಿತ್ತು. ಏಪ್ರಿಲ್ ತಿಂಗಳ ಕೊನೆಯಲ್ಲಿ ಇಡಿ ಶಿಯೋಮಿಯ 5,551.25 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಟಾಟಾ ಉಕ್ಕು ಘಟಕದಲ್ಲಿ ಭಾರೀ ಸ್ಫೋಟ
Advertisement
ಶಿಯೋಮಿ ಭಾರತದಲ್ಲಿ 2014ರಿಂದ ತನ್ನ ಕಾರ್ಯಾಚರಣೆ ಪ್ರಾರಂಭಿಸಿ, 2015ರಿಂದ ಕಾನೂನುಬಾಹಿರವಾಗಿ ಹಣ ವರ್ಗಾಯಿಸಲು ಪ್ರಾರಂಭಿಸಿತ್ತು. ಶಿಯೋಮಿ ಗ್ರೂಪ್ ಸೇರಿದಂತೆ ಒಟ್ಟು 3 ವಿದೇಶೀ ಘಟಕಗಳಿಗೆ ಸುಮಾರು 5,551.27 ಕೋಟಿ ರೂ. ಹಣವನ್ನು ವರ್ಗಾಯಿಸಿದೆ ಎಂದು ಇಡಿ ಆರೋಪಿಸಿದೆ.