ಕೋಲಾರ: ದೇಶದಲ್ಲಿ ಇಡಿ, ಸಿಬಿಐ ಇರುವುದು ಕೇವಲ ಕಾಂಗ್ರೆಸ್‌ಗೆ ಎನ್ನುವಂತಾಗಿದೆ ಎಂದು ಕೇಂದ್ರದ ನಡೆ ವಿರುದ್ಧ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ದಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ವಿಚಾರವಾಗಿ ಅನ್ವರ್ ಮಾಣಿಪ್ಪಾಡಿ (Anwar Manippady) ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಮತ್ತು ಮಾಜಿ ಸಿಎಂ ಯಡಿಯೂರಪ್ಪ (BS Yediyurappa) 150 ಕೋಟಿ ರೂ.ಗಳ ಆರೋಪ ಮಾಡಿದ್ದರೂ ಸಹ ಇಡಿ, ಸಿಬಿಐನವರು ಏನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ಲಂಚದ ಆರೋಪ ಮಾಡುತ್ತಿರುವುದು ಅನ್ವರ್ ಮಾಣಿಪ್ಪಾಡಿ ಸಿಎಂ ಅಲ್ಲ. ಈ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒತ್ತಡ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅನ್ವರ್ ಮಾಣಿಪ್ಪಾಡಿ ಈಗಲೂ ಬಿಜೆಪಿಯ ಓರ್ವ ಪ್ರಮುಖ ನಾಯಕ. ಪ್ರತಿದಿನ ಸುಳ್ಳು ಆರೋಪಗಳಿಗೆ ಇಡಿ, ಸಿಬಿಐ ನೋಟಿಸ್ ನೀಡುತ್ತಾರೆ. ಆದರೆ ಸಿಬಿಐಗೆ ಸಾಂವಿಧಾನಿಕ ಜವಾಬ್ದಾರಿ ಇದ್ದರೆ ತನಿಖೆ ಮಾಡಬೇಕು, ಸತ್ಯಾಸತ್ಯತೆ ಹೊರಬರಲು ಇದು ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದರು.
ಇನ್ನೂ ಅದಾನಿ ಮೇಲೆ ಎರಡೂವರೆ ಸಾವಿರ ಕೋಟಿ ಲಂಚ ಆರೋಪದ ಎಫ್‌ಐಆರ್ ಅಮೇರಿಕಾದಲ್ಲಿ ಆಗಿದೆ. ಆ ಪ್ರಕರಣದಲ್ಲೂ ಇಡಿ, ಸಿಬಿಐ ಏನೂ ಮಾಡದೆ ನಾಟಕ ಮಾಡುತ್ತಿದ್ದಾರೆ. ಕೋವಿಡ್ ಹಗರಣ ತನಿಖೆ ದ್ವೇಷ ರಾಜಕೀಯ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೆಣದಲ್ಲಿ ಹಣ ಮಾಡಿದ್ದನ್ನು ಮರೆಯಬೇಕಾ? ಕಳಪೆ ಸಾಮಗ್ರಿ, ಟೆಸ್ಟಿಂಗ್‌ನಲ್ಲಿ ಡಬಲ್ ದುಡ್ಡು ಮಾಡಿದ್ದರು. ಸಾವಿನಲ್ಲೂ ಹಣ ಮಾಡಿದ ಸಂಸ್ಕೃತಿಯನ್ನು ಬಿಟ್ಟು ಬಿಡಬೇಕಾ? ನ್ಯಾಯಾಂಗ ತನಿಖೆಯ ವರದಿ ಆಧರಿಸಿ ಕಾನೂನು ಕ್ರಮ ಆರಂಭಿಸಿದ್ದೇವೆ. ಮಾರಕ ಕಾಯಿಲೆ ದೇಶ ಪ್ರಪಂಚವನ್ನು ಬುಡಮೇಲೆ ಮಾಡುವಾಗ ಅದರಲ್ಲೂ ದುಡ್ಡು ಮಾಡಿದರು. ಇದು ಯಾವ ಮಾನವೀಯ ಧರ್ಮ? ಹಿಂದೂ ಧರ್ಮದ ಹೆಸರಲ್ಲಿ ವೋಟು ಹಾಕಿಸಿಕೊಂಡರು ಎಂದು ಕಿಡಿಕಾರಿದರು.
ಇದೆಲ್ಲ ಹಿಂದೂ ಧರ್ಮಕ್ಕೆ ಮಾಡಿದ ಅಪಚಾರ ಅಲ್ಲವೇ? ಸತ್ಯಸಂಗತಿ ಹೊರಗೆ ಬರಬೇಕೆಂದರೆ ತನಿಖೆಯಾಗಲಿ, ದುಡ್ಡು ಯಾರು ಮಾಡುವುದಿಲ್ಲ ಎಂದಲ್ಲ. ಎಲ್ಲರೂ ಸಾಚಾಗಳು ಅಲ್ಲ, ಆದರೆ ಇವರು ಸಾವಿನಲ್ಲೂ ದುಡ್ಡು ಮಾಡಿದ್ದಾರೆ. ಇದು ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿಗೆ ತಪ್ಪು ಎನ್ನಿಸಲ್ಲ. ಮಾನವೀಯತೆ ಇಲ್ಲದೆ ದುಡ್ಡು ಮಾಡಿದ್ದಾರೆ. ಇವರು ಮನುಷ್ಯರಾ ಅಥವಾ ರಾಕ್ಷಸ ಪ್ರವೃತ್ತಿಗೆ ಸೇರಿದವರಾ? ಎಂಬ ಬಗ್ಗೆ ತನಿಖೆ ಆಗುತ್ತಿದೆ ಎಂದು ತಿರುಗೇಟು ನೀಡಿದರು.ಇದನ್ನೂ ಓದಿ: ನಾವು 2ಎ ಮೀಸಲಾತಿ ಕೇಳಿಲ್ಲ, ಕಾಂಗ್ರೆಸ್ ಮಾಜಿ ಶಾಸಕನ ಅವಾಂತರ ಇದು – ಯತ್ನಾಳ್ ಕಿಡಿ