ನವದೆಹಲಿ: ಛತ್ತೀಸ್‍ಗಢದ ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯ (Directorate of Enforcement) ಶಾಕ್ ನೀಡಿದೆ. ಕಲ್ಲಿದ್ದಲು ಹಗರಣಕ್ಕೆ (Coal levy scam) ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರು, ನಾಯಕರ ಮನೆ, ಕಚೇರಿಯ ಮೇಲೆ ದಾಳಿ ನಡೆಸಿದೆ.
Advertisement
ಬೆಳಗ್ಗೆಯಿಂದ 17 ಸ್ಥಳಗಳಲ್ಲಿ ಶೋಧ ಕಾರ್ಯಗಳು ನಡೆಸಲಾಗಿದೆ. ದುರ್ಗ್ ಶಾಸಕ ದೇವೇಂದ್ರ ಯಾದವ್, ಛತ್ತೀಸ್‍ಗಢದ ಕಾಂಗ್ರೆಸ್ ಖಜಾಂಚಿ ರಾಮ್‍ಗೋಪಾಲ್ ಅಗರವಾಲ್, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸುಶೀಲ್ ಸನ್ನಿ ಅಗರ್‍ವಾಲ್ ಮತ್ತು ಪಕ್ಷದ ವಕ್ತಾರ ಆರ್.ಪಿ ಸಿಂಗ್ ಅವರ ಮನೆಗಳು ಸೇರಿವೆ. ಇದನ್ನೂ ಓದಿ: ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ
Advertisement
ಉದ್ಯಮಿಗಳು, ದಲ್ಲಾಳಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಪ್ರತಿ ಟನ್ ಕಲ್ಲಿದ್ದಲ್ಲಿಗೆ ಅಕ್ರಮವಾಗಿ 25 ರೂ.ಗಳನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
Advertisement
Advertisement
ಫೆ.24 ರಿಂದ ನಡೆಯಲಿರುವ ಕಾಂಗ್ರೆಸ್ ಮಹಾಧಿವೇಶನದ ಹಿನ್ನೆಲೆಯಲ್ಲಿ ಬಿಜೆಪಿ (BJP) ಹತಾಶೆಗೊಂಡು ಇಡಿಯನ್ನು ಬಳಸಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಿದೆ ಎಂದು ಛತ್ತಿಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಛತ್ತೀಸ್‍ಗಢದ ಕಾಂಗ್ರೆಸ್‍ನ ಖಜಾಂಚಿ, ಮಾಜಿ ಉಪಾಧ್ಯಕ್ಷ ಮತ್ತು ಶಾಸಕ ಸೇರಿದಂತೆ ಅನೇಕರ ಮನೆ ಮೇಲೆ ಇಡಿ ದಾಳಿ ನಡೆಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆ ಹಾಗೂ ಅದಾನಿಯ ಸತ್ಯ ಬಯಲಾಗಿ ಈಗಾಗಲೇ ಹತಾಶೆಗೊಂಡಿರುವ ಬಿಜೆಪಿ ಜನರ ಗಮನ ಬೇರೆಡೆ ಸೆಳೆಯುವ ತಂತ್ರವಾಗಿ ಈ ದಾಳಿಯನ್ನು ಪ್ರಯೋಗಿಸಿದೆ. ದೇಶಕ್ಕೆ ಈಗಾಗಲೇ ಸತ್ಯ ತಿಳಿದಿದೆ. ನಾವು ಹೋರಾಡಿ ಗೆಲ್ಲುತ್ತೇವೆ ಎಂದು ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ.
ಈ ವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಸೂರ್ಯಕಾಂತ್ ತಿವಾರಿ ಮತ್ತವರ ಚಿಕ್ಕಪ್ಪ ಲಕ್ಷ್ಮೀಕಾಂತ್ ತಿವಾರಿ, ಅಡಳಿತ ಸೇವೆಯ ಅಧಿಕಾರಿ ಸಮೀರ್ ವಿಷ್ಣೋಯ್, ಮತ್ತು ಉದ್ಯಮಿ ಸುನಿಲ್ ಅಗರ್‍ವಾಲ್ ಹಾಗೂ ಇನ್ನಿತರರನ್ನು ಬಂಧಿಸಲಾಗಿದೆ.
ಕಲ್ಲಿದ್ದಲು ಅಕ್ರಮ ತೆರಿಗೆಯಲ್ಲಿ 52 ಕೋಟಿ ರೂ.ಗಳು ಕಾಂಗ್ರೆಸ್‍ನ (Congress) ಹಿರಿಯ ನಾಯಕರಿಗೆ ಹಾಗೂ ನಾಲ್ಕು ಕೋಟಿ ರೂ.ಗಳು ಕೆಲವು ಶಾಸಕರಿಗೆ ಹಂಚಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚುನಾವಣೆ ಹತ್ತಿರ ಬಂದಾಗ ಕೇಂದ್ರದ ಸಂಸ್ಥೆಗಳು ಎಚ್ಚರಗೊಳ್ಳುತ್ತವೆ ಎಂದು ಕಾಂಗ್ರೆಸ್ ಹಿಂದಿನಿಂದಲೂ ಆರೋಪಿಸಿದೆ. ಈ ವರ್ಷದ ಕೊನೆಯಲ್ಲಿ ಛತ್ತೀಸ್‍ಗಢದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k