ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯದ(ಎನ್‌ಎಸ್‌ಇ) ವಂಚನೆ ಪ್ರಕರಣದಲ್ಲಿ ಎನ್‌ಎಸ್‌ಇ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಬಂಧಿಸಿದೆ.
ಇಂದು ಮುಂಜಾನೆ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ದೆಹಲಿ ನ್ಯಾಯಾಲಯ ಇದೀಗ ಚಿತ್ರಾ ರಾಮಕೃಷ್ಣ ಅವರನ್ನು 4 ದಿನಗಳ ಇಡಿ ಕಸ್ಟಡಿಗೆ ಕಳುಹಿಸಿದೆ. ಇದನ್ನೂ ಓದಿ: “ದಿವ್ಯ ಕಾಶಿ – ಭವ್ಯ ಕಾಶಿ”ಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ: ಬೊಮ್ಮಾಯಿ
Advertisement
Advertisement
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ, ನಾರಾಯಣ್ ಹಾಗೂ ಚಿತ್ರಾ ರಾಮಕೃಷ್ಣ ವಿರುದ್ಧ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ: ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಎರಡು ವರ್ಷ ಜೈಲು ಶಿಕ್ಷೆ
Advertisement
ಚಿತ್ರಾ ಅವರು ಸಂಸ್ಥೆಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಸ್ಥೆಯ ರಚನೆ, ಲಾಭಾಂಶ ಮಾಹಿತಿ, ಆರ್ಥಿಕ ಫಲಿತಾಂಶ, ಮಾನವ ಸಂಪನ್ಮೂಲ ನೀತಿ, ಸಮಸ್ಯೆ ಹೀಗೆ ಎಲ್ಲಾ ಗೌಪ್ಯ ವಿಚಾರಗಳನ್ನು ಅಪರಿಚಿತ ವ್ಯಕ್ತಿಯೊಡನೆ ಇ-ಮೇಲ್ ಮುಖಾಂತರ ಹಂಚಿಕೊಂಡಿದ್ದಾರೆ ಎಂಬ ಆರೋಪ ಬಂದಿದೆ.