ನವದೆಹಲಿ : ದೆಹಲಿ (Dehli) ವಕ್ಫ್ ಬೋರ್ಡ್ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.
ದೆಹಲಿಯ ಓಖ್ಲಾ ವಿಧಾನಸಭೆ ಕ್ಷೇತ್ರವನ್ನು ಅಮಾನತುಲ್ಲಾ ಖಾನ್ (AmanatullahKhan) ಪ್ರತಿನಿಧಿಸಿತ್ತಿದ್ದು, ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೇಮಕಾತಿ ಮತ್ತು ಹಣಕಾಸಿನ ಅವ್ಯವಹಾರದಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದು, ಬಂಧನಕ್ಕೂ ಮುನ್ನ ಇಂದು ಬೆಳಗ್ಗೆ ಆರು ಗಂಟೆಗಳ ಕಾಲ ಅವರ ಮನೆಯಲ್ಲಿ ತಪಾಸಣೆ ನಡೆಸಲಾಯಿತು. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
ಇಡಿ ದಾಳಿ ವೇಳೆ ಮಾತನಾಡಿದ್ದ ಅಮಾನತುಲ್ಲಾ ಖಾನ್ “ನನ್ನನ್ನು ಬಂಧಿಸಲು ಇಡಿ ಜನರು ಈಗಷ್ಟೇ ನನ್ನ ಮನೆಗೆ ಬಂದಿದ್ದಾರೆ” ನನಗೆ ಮತ್ತು ಆಪ್ (APP) ನಾಯಕರಿಗೆ ಕಿರುಕುಳ ನೀಡಲು ಸರ್ವಾಧಿಕಾರಿ ಯಾವುದೇ ಕಾರಣ ಬಿಡುತ್ತಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ? ಈ ಸರ್ವಾಧಿಕಾರ ಎಷ್ಟು ದಿನ ಉಳಿಯುತ್ತದೆ ಎಂದು ಹೇಳಿದ್ದರು. ಬಂಧನದ ಬಳಿಕ ಮನೆಯಿಂದ ಹೊರಗೆ ಅವರನ್ನು ಕರೆದೊಯ್ದಯುವಾಗ ಮಾತನಾಡಿ “ನಾನು ನಿರಪರಾಧಿ” ಎಂದು ಹೇಳಿದರು. ಇದನ್ನೂ ಓದಿ: ಜಾತಿ ಗಣತಿ ಸೂಕ್ಷ್ಮ ವಿಚಾರ, ಚುನಾವಣಾ ಉದ್ದೇಶಕ್ಕೆ ಬಳಸಬಾರದು: ಆರ್‌ಎಸ್‌ಎಸ್
ಅಮಾನತುಲ್ಲಾ ಖಾನ್ ಬಂಧನವನ್ನು ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ವಿರೋಧಿಸಿದ್ದಾರೆ. ಬಿಜೆಪಿಯು (BJP) ರಾಜಕೀಯ ದ್ವೇಷದ ಕಾರಣದಿಂದಾಗಿ ಖಾನ್ ಅವರನ್ನು ಬಂಧಿಸಿದೆ. ಅಮಾನತುಲ್ಲಾ ವಿರುದ್ಧ ಯಾವುದೇ ಪುರಾವೆಗಳಿಲ್ಲ ಆದರೆ ಮೋದಿಯವರ (Narendra Modi) ಸರ್ವಾಧಿಕಾರ ಮತ್ತು ಇಡಿ ಗೂಂಡಾಗಿರಿ ಎರಡೂ ಮುಂದುವರೆದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಕ್ಫ್ ಬೋರ್ಡ್ನಲ್ಲಿ ಅಕ್ರಮ – ಆಪ್ ಶಾಸಕ ಅರೆಸ್ಟ್
ಇತ್ತೀಚೆಗಷ್ಟೇ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದು, ಇಡಿಗೆ ಇದೊಂದೇ ಕೆಲಸ, ಬಿಜೆಪಿ ವಿರುದ್ಧ ಎದ್ದ ಪ್ರತಿ ದನಿಯನ್ನೂ ದಮನ ಮಾಡುವುದು, ಬಂಧಿಸಿ ಜೈಲಿಗೆ ಹಾಕುವುದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ – ಹಾರಂಗಿ ಜಲಾಶಯದಿಂದ 11,800 ಕ್ಯುಸೆಕ್ ನೀರು ಹೊರಕ್ಕೆ
ಖಾನ್ ಮೇಲಿರುವ ಆರೋಪ ಏನು?
2018 ಮತ್ತು 2022 ರ ನಡುವೆ ವಕ್ಫ್ ಬೋರ್ಡ್ ನೇಮಕಾತಿ ಮತ್ತು ಆಸ್ತಿಯಲ್ಲಿ ಅಕ್ರಮ ವ್ಯವಹಾರ ಮಾಡಿದ್ದಾರೆ, ಕಾನೂನುಬಾಹಿರ ವಿಧಾನಗಳ ಮೂಲಕ ಹಣಕಾಸಿನ ಲಾಭವನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಖಾನ್ ಅವರನ್ನು ಈ ಹಿಂದೆ 12 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ವಿಚಾರಣೆ ಬಳಿಕ ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಖಾನ್ “ಅಪಾರದ ಆದಾಯವನ್ನು” ನಗದು ರೂಪದಲ್ಲಿ ಗಳಿಸಿದ್ದಾರೆ ಮತ್ತು ತನ್ನ ಸಹಚರರ ಹೆಸರಿನಲ್ಲಿ ಸ್ಥಿರ ಆಸ್ತಿಗಳನ್ನು ಖರೀದಿಸಲು ಹೂಡಿಕೆ ಮಾಡಿದ್ದಾರೆ ಎಂದು ಇಡಿ ಹೇಳಿತ್ತು. ಕಳೆದ ಮಾರ್ಚ್ನಲ್ಲಿ ಖಾನ್‌ಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ತನಿಖಾ ಸಂಸ್ಥೆಗಳಿಂದ ಸಮನ್ಸ್ನಿಂದ ಪದೇ ಪದೇ ತಪ್ಪಿಸಿಕೊಳ್ಳುವುದನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಕೂಡ ಬಂಧನದಿಂದ ರಕ್ಷಣೆ ನಿರಾಕರಿಸಿತ್ತು. ಇದನ್ನೂ ಓದಿ: ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ, ಎತ್ತಿನಹೊಳೆ ಯೋಜನೆ ನೀರು ಬಿಡುಗಡೆ: ಡಿಕೆಶಿ