– ಎಲ್ಲೆಲ್ಲಿ ಟ್ರಾಫಿಕ್ ಜಾಮ್?
ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರು ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಪ್ರತಿಭಟನೆಗೆ ಲಕ್ಷಾಂತರ ಜನರು ಬರುವ ನಿರೀಕ್ಷೆಯಿದ್ದು ಬೆಂಗಳೂರು ಸಂಚಾರ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಲಿದೆ.
ಡಿಕೆಶಿ ಬಂಧನ ಖಂಡಿಸಿ ಇಂದು ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ನ್ಯಾಷನಲ್ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್ ವರೆಗೂ ರ‍್ಯಾಲಿ ಆಯೋಜನೆ ಮಾಡಲಾಗಿದ್ದು ಮಾರ್ಗದುದ್ದಕ್ಕೂ ಸಂಚಾರ ಅಸ್ತವ್ಯಸ್ತವಾಗಲಿದೆ.
Advertisement
Advertisement
ರ‍್ಯಾಲಿ ಸಾಗೋ ಮಾರ್ಗ:
ನ್ಯಾಷನಲ್ ಕಾಲೇಜ್ ಮೈದಾನದಿಂದ ಎಡ ತಿರುವು- ಪಿ ಎಂ.ಕೆ ರಸ್ತೆಯಲ್ಲಿ ಎಡ ತಿರುವು – ವಾಣಿವಿಲಾಸ ರಸ್ತೆ- ನ್ಯಾಷನಲ್ ಕಾಲೇಜ್ ಜಂಕ್ಷನ್- ಡಯಾಗನಲ್ ರಸ್ತೆ- ಸಜ್ಜನ್ ರಾವ್ ಸರ್ಕಲ್- ಮಿನರ್ವ ಸರ್ಕಲ್- ಜೆಸಿ ರಸ್ತೆ- ಶಿವಾಜಿ ಜಂಕ್ಷನ್- ಟೌನ್ ಹಾಲ್- ಎನ್.ಆರ್.ಜಂಕ್ಷನ್- ಪೋಲಿಸ್ ಠಾಣೆ ಜಂಕ್ಷನ್- ಪೊಲೀಸ್ ಕಾರ್ನರ್ ಎಡ ತಿರುವು- ಕೆ.ಜಿ.ರಸ್ತೆ- ಮೈಸೂರು ಬ್ಯಾಂಕ್ ಸರ್ಕಲ್ ಬಲ ತಿರುವು – ಪ್ಯಾಲೇಸ್ ರೋಡ್- ಪ್ಯಾಲೇಸ್ ಜಂಕ್ಷನ್ ಎಡ ತಿರುವು- ವೈ ರಾಮಚಂದ್ರ ರಸ್ತೆ- ಕನಕದಾಸ ವೃತ್ತ ಬಲ ತಿರುವು – ಕಾಳಿದಾಸ ರಸ್ತೆ- ಫ್ರೀಡಂಪಾರ್ಕ್
Advertisement
ರ‍್ಯಾಲಿಯಿಂದ ನಗರದ ಪ್ರಮುಖ ರಸ್ತೆಗಳೆಲ್ಲವೂ ಫುಲ್ ಲಾಕ್ ಆಗೋದರಲ್ಲಿ ಯಾವುದೇ ಡೌಟ್ ಇಲ್ಲ. ಇದರಿಂದ ಅರ್ಧ ಬೆಂಗಳೂರು ಸ್ತಬ್ಧವಾಗಲಿದ್ದು, ವಾಹನ ಸವಾರರು 2 ಗಂಟೆ ಮುಂಚೆಯೇ ತಮ್ಮ ತಮ್ಮ ಕಚೇರಿಗಳಿಗೆ ಹೋಗೋದು ಉತ್ತಮ.
Advertisement
ಎಲ್ಲೆಲ್ಲಿ ಟ್ರಾಫಿಕ್ ಜಾಮ್?
*ಜೆ.ಸಿ. ರೋಡ್
*ಟೌನ್‍ಹಾಲ್
*ಕೆ.ಆರ್. ಮಾರ್ಕೆಟ್
*ಕಾರ್ಪೋರೇಷನ್ ಸರ್ಕಲ್
*ಮೈಸೂರು ಬ್ಯಾಂಕ್ ಸರ್ಕಲ್
*ಕೆ.ಆರ್. ಸರ್ಕಲ್
*ಆನಂದರಾವ್ ವೃತ್ತ
*ನೃಪತುಂಗ ರೋಡ್
*ವಿಧಾನಸೌಧ ಸುತ್ತಮುತ್ತ
*ಮೆಜೆಸ್ಟಿಕ್
ಸಂಚಾರ ನಿರ್ವಹಣೆಗಾಗಿಯೇ ಸುಮಾರು 1200 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.