– ಮಳೆಗಾಲದ ಅಧಿವೇಶನ ನೆಪದಲ್ಲಿ ವಿಚಾರಣೆಗೆ ಗೈರಾಗ್ತಾರಾ ದದ್ದಲ್?
ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) 187 ಕೋಟಿ ರೂ. ಹಗರಣದ ಪ್ರಕರಣದಲ್ಲಿ ಸಿಲುಕಿರುವ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagouda Daddal) ಇಡಿ (ED) ಬಂಧನದ ಭೀತಿಯಲ್ಲೇ ಓಡಾಡುತ್ತಿದ್ದಾರೆ. ಯಾರ ಸಂಪರ್ಕಕ್ಕೂ ಸಿಗದ ದದ್ದಲ್ ರಾತ್ರೋರಾತ್ರಿ ರಾಯಚೂರಿಗೆ (Raichur) ಬಂದು ಆಪ್ತರನ್ನು ಮಾತ್ರ ಭೇಟಿ ಮಾಡಿ ಹೋಗಿದ್ದಾರೆ.
Advertisement
ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿಯಲ್ಲಿರುವ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಇಡಿ ವಿಚಾರಣೆಗೆ ಹಾಜರಾಗ್ತಾರಾ? ಅಥವಾ ಯಾರ ಸಂಪರ್ಕಕ್ಕೂ ಸಿಗದೇ ಅಜ್ಞಾತವಾಸದಲ್ಲೇ ಮುಂದುವೆರೆಯುತ್ತಾರಾ? ಅನ್ನೋದು ಸದ್ಯದ ಕುತೂಹಲ. ಆದರೆ ಇಡಿ ಬಂಧನದ ಭೀತಿಯಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಬಂಧಿಸುವಂತೆ ಕೇಳಿಕೊಂಡಿರುವ ದದ್ದಲ್ ಈಗ ಪ್ಲಾನ್ ಬಿ ನಡೆಸಿರುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಇದನ್ನೂ ಓದಿ: ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್, ಕೆಎಲ್ ರಾಹುಲ್ ಭಾಗಿ
Advertisement
Advertisement
ಇಂದಿನಿಂದ ಆರಂಭವಾಗುವ ಮಳೆಗಾಲದ ಅಧಿವೇಶನ ನೆಪದಲ್ಲಿ ಇಡಿ ವಿಚಾರಣೆಗೆ ಗೈರಾಗುವ ಸಾಧ್ಯತೆಗಳೂ ಇವೆ. ಎರಡು ದಿನಗಳ ಕಾಲ ನಡೆದ ಇಡಿ ದಾಳಿಯಲ್ಲಿ ಅಧಿಕಾರಿಗಳು ಸಾಕಷ್ಟು ದಾಖಲೆಗಳನ್ನು ಕಲೆ ಹಾಕಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿರುವ ದದ್ದಲ್ ಇಂದಿನ ಅಧಿವೇಶನದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ವಿಚಾರಣೆಗೆ ಗೈರಾದರೆ ಸ್ಪೀಕರ್ ಅನುಮತಿ ಪಡೆದು ದದ್ದಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸುವ ಅವಕಾಶವಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕಸ ತೆಗೆಯಲು 30 ವರ್ಷಕ್ಕೆ ಗುತ್ತಿಗೆ – 45 ಸಾವಿರ ಕೋಟಿ ಟೆಂಡರ್‌ನಲ್ಲಿ 15 ಸಾವಿರ ಕಿಕ್ ಬ್ಯಾಕ್: ಹೆಚ್‌ಡಿಕೆ ಬಾಂಬ್
Advertisement
ಯಾರ ಸಂಪರ್ಕಕ್ಕೂ ಸಿಗದ ಬಸನಗೌಡ ದದ್ದಲ್ ರಾತ್ರೋರಾತ್ರಿ ರಾಯಚೂರಿಗೆ ಬಂದು ಬೆಳಗಾಗುತ್ತಿದ್ದಂತೆ ಹೊರಟು ಹೋಗಿದ್ದು ಯಾಕೆ ಎಂಬ ಪ್ರಶ್ನೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕುಟುಂಬ ಬಿಟ್ಟು ಏಕಾಂಗಿಯಾಗಿ ರಾಯಚೂರಿಗೆ ಬಂದ ದದ್ದಲ್ ಕೆಲವೇ ಕೆಲವು ಆಪ್ತರೊಂದಿಗೆ ಸಮಾಲೋಚನೆ ನಡೆಸಿ, ಬೆಳಗ್ಗೆ ಮಂತ್ರಾಲಯ ಮಾರ್ಗವಾಗಿ ಬೆಂಗಳೂರು ಕಡೆಗೆ ಹೊರಟು ಹೋಗಿದ್ದಾರೆ. ತನ್ನ ಕಾರನ್ನು ಬಳಸದೆ ಬೆಂಗಳೂರಿನಿಂದ ಬರುವಾಗ ಆಪ್ತರ ಕಾರನ್ನು ಬಳಸಿದ್ದಾರೆ. ಮಂತ್ರಾಲಯದವರೆಗೂ ಆಪ್ತನ ಕಾರಿನಲ್ಲೇ ತೆರಳಿ ಮಂತ್ರಾಲಯದಿಂದ ಕಾರು ಬದಲಿಸಿ ಬೆಂಗಳೂರು ಕಡೆಗೆ ಹೋಗಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ: ತನಿಖೆಗೆ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶ!
ಭಾನುವಾರ ಬೆಳಗ್ಗೆ ರಾಯಚೂರಿನಿಂದ ಹೊರಟ ಬಸನಗೌಡ ದದ್ದಲ್ ಮಾರ್ಗಮಧ್ಯೆ ಗಿಲ್ಲೆಸುಗೂರಿನಲ್ಲಿ ಕಾರ್ಯಕರ್ತರನ್ನು ಮಾತನಾಡಿಸಿದ್ದಾರೆ. ಗುಡದೂರಿನ ರಾಮರಾವು ತಾತನ ಆಶಿರ್ವಾದ ಪಡೆದು ದದ್ದಲ್ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಬೇರೆ ಯಾರ ಸಂಪರ್ಕಕ್ಕೆ ಸಿಗದೆ ಓಡಾಡಿಕೊಂಡಿರುವ ದದ್ದಲ್ ಇಡಿ ಬಂಧನ ಭೀತಿಯಲ್ಲಿ ಕಣ್ಣಾಮುಚ್ಚಾಲೆ ಆಟ ನಡೆಸಿದ್ದಾರೆ. ಇದನ್ನೂ ಓದಿ: Karnataka Assembly Session| ಟಾರ್ಗೆಟ್ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು