ಬೆಂಗಳೂರು: 2,000 ರೂ. ಮುಖಬೆಲೆಯ ನೋಟು ಚಲಾವಣೆಯನ್ನು ಆರ್‌ಬಿಐ ಹಿಂಪಡೆದಿದ್ದರಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಇಲ್ಲ. ರೇಡ್ ಆದಾದ ಬೀರುವಿನಲ್ಲಿ, ಹಾಸಿಗೆ ಕೆಳಗೆ, ದಿಂಬಿನ ಒಳಗೆ, ಬಾತ್‌ರೂಂನಲ್ಲಿ ಇಟ್ಟವರಂತೆ ಕಂತೆ ಕಂತೆ ನೋಟು ಹೊಂದಿರುವವರು ಗಾಬರಿ ಪಡಬೇಕು ಎಂದು ಆರ್ಥಿಕ ತಜ್ಞ ರುದ್ರಮೂರ್ತಿ (Rudramurthy) ಹೇಳಿದರು.
ಆರ್‌ಬಿಐ (RBI) ಪ್ರಕಟಣೆ ಕುರಿತು ಮಾತನಾಡಿದ ಅವರು, ಆರು ವರ್ಷದ ನಂತರ 2 ಸಾವಿರ ನೋಟನ್ನ ಹಿಂಪಡೆಯುತ್ತಾ ಇದ್ದಾರೆ. 2 ಸಾವಿರ ನೋಟ್ ಇದ್ರೆ ಯಾವುದೇ ಬ್ಯಾಂಕ್‌ಗೆ ತೆರಳಿ ಬದಲಾಯಿಸಿಕೊಳ್ಳಬಹುದು. ಡೆಪಾಸಿಟ್ ಕೂಡ ಮಾಡಬಹುದು. ಸೆಪ್ಟೆಂಬರ್ 30 ರವರೆಗೂ ಅವಕಾಶ ಇದೆ. ಅಕೌಂಟ್ ಇಲ್ಲದೇ ಇರೋ ಬ್ಯಾಂಕ್‌ಗೆ ಹೋದರೆ ಬರೀ 20 ಸಾವಿರ ಅಷ್ಟೇ ಬದಲಾವಣೆ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್ ಬ್ಯಾನ್ ಮಾಡಿದ RBI
ಇದು ಸಂಪೂರ್ಣ ಪ್ಲ್ಯಾನ್ ಆಕ್ಟ್. 2 ಸಾವಿರ ರೂಪಾಯಿ ನೋಟು ಚಲಾವಣೆ ಮಾಡಿ 6 ವರ್ಷ ಆಗಿದೆ. ಹಳೇದು ಆಗಿರುತ್ತೆ ಅಂತಾ ಬ್ಯಾನ್ ಮಾಡ್ತಾ ಇದ್ದೇವೆ ಅಂತಿದೆ ಆರ್‌ಬಿಐ. ಬೇರೆ ಬೇರೆ ದೇಶಗಳಿಂದ ಖೋಟಾ ನೋಟು ಚಲಾವಣೆ ತಡೆಯಲಿಕ್ಕೆ ಈ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಆಗಲ್ಲ. ಯಾರು ಕಪ್ಪುಹಣ ಹೊಂದಿರುತ್ತಾರೋ, ಉಗ್ರ ಚಟುವಟಿಕೆಗೆ ಹಣ ಬಳಕೆ ಮಾಡುತ್ತಾರೋ, ತೆರಿಗೆ ಕಟ್ಟದೇ ಇರುತ್ತಾರೋ ಅಂತಹವರಿಗೆ ಇದರಿಂದ ತೊಂದರೆ ಆಗುತ್ತೆ ಎಂದು ಸ್ಪಷ್ಟಪಡಿಸಿದರು.
ಯಾರು ತೆರಿಗೆ ವಂಚನೆ ಮಾಡಿ ಈಗ ಡೆಪಾಸಿಟ್ ಮಾಡೋಕೆ ಹೋಗ್ತಾರೋ, ಅವರಿಗೆ ತುಂಬಾ ತೊಂದರೆ ಆಗಲಿದೆ. ಅವರು ಅದಕ್ಕೆ ಲೆಕ್ಕ ಕೊಡಬೇಕಾಗುತ್ತೆ. ಕಪ್ಪುಹಣ ಹಾವಳಿ ತಡೆಯೋದಕ್ಕೂ ಕೂಡ ಇದು ಸಹಕಾರಿ ಎಂದರು. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್ ಬ್ಯಾನ್ – ಕೇಂದ್ರ ಬಿಜೆಪಿ ವಿರುದ್ಧ ನಿಯೋಜಿತ ಸಿಎಂ ಸಿದ್ದರಾಮಯ್ಯ ಕಿಡಿ