– ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ
ನವದೆಹಲಿ: 2025 ರಲ್ಲಿ ಶೇ.6.5 -7 ರಷ್ಟು ಆರ್ಥಿಕ ಬೆಳವಣಿಗೆಯಾಗಲಿದೆ. PM-AWAS-ಗ್ರಾಮೀಣ ಯೋಜನೆಯ ಅಡಿ ಕಳೆದ ಒಂಬತ್ತು ವರ್ಷಗಳಲ್ಲಿ ಬಡವರಿಗೆ 2.63 ಕೋಟಿ ಮನೆ ನಿರ್ಮಾಣ ಮಾಡಲಾಗಿದೆ. ಪಿಎಂ ಉಜ್ವಲ ಯೋಜನೆಯ ಅಡಿ 10.3 ಕೋಟಿ LPG ಸಂಪರ್ಕ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Advertisement
ಬಜೆಟ್ ಮುನ್ನಾ ದಿನವಾದ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಆರ್ಥಿಕ ಸಮೀಕ್ಷೆಯನ್ನು (Economic Survey) ಲೋಕಸಭೆಯಲ್ಲಿ ಮಂಡಿಸಿದರು.
Advertisement
ಭಾರತದ ಆರ್ಥಿಕತೆಯ (Indian Economy) ಬಲವಾಗಿದೆ. ಸ್ಥಿರವಾದ ಹೆಜ್ಜೆಯನ್ನು ಇಡುತ್ತಿದೆ. ಕೋವಿಡ್ ನಂತರ ಆರ್ಥಿಕತೆ ಚೇತರಿಕೆ ಕಂಡಿದ್ದು, ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ಜೈಲೂಟವೇ ಗತಿ
Advertisement
The Economic Survey highlights the prevailing strengths of our economy and also showcases the outcomes of the various reforms our Government has brought.
It also identifies areas for further growth and progress as we move towards building a Viksit Bharat.…
— Narendra Modi (@narendramodi) July 22, 2024
ಆರ್ಥಿಕ ಸಮೀಕ್ಷೆ ಪ್ರಮುಖಾಂಶಗಳು
* 2024-25ರಲ್ಲಿ ಆರ್ಥಿಕತೆ 6.5% ರಿಂದ 7% ರಷ್ಟು ಬೆಳವಣಿಗೆ.
* ಬಂಡವಾಳ ಮಾರುಕಟ್ಟೆ ಪಾತ್ರ ಮಹತ್ವವಾಗಿದೆ.
* ತಂತ್ರಜ್ಞಾನ, ನಾವೀನ್ಯತೆ, ಡಿಜಿಟಲೀಕರಣ ಮತ್ತಷ್ಟು ವಿಸ್ತಾರ.
Advertisement
* ಜಾಗತಿಕ ಮಟ್ಟದಲ್ಲಿ ಆರ್ಥಿಕ, ರಾಜಕೀಯ ಸಂಘರ್ಷಗಳಿದ್ದರೂ ಭಾರತದ ಮಾರುಕಟ್ಟೆ ಸ್ಥಿರ.
* ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾಗವಹಿಸುವಿಕೆಯಲ್ಲಿ ಹೆಚ್ಚಾದ ಭಾರತದ ಪಾತ್ರ.
* ರಕ್ಷಣಾ ಉತ್ಪನ್ನಗಳ ರಫ್ತಿನ ಪ್ರಮಾಣದಲ್ಲಿ ಹೆಚ್ಚಳ. ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಶಾಕಿಂಗ್ ಸುದ್ದಿ – 9 ಗಂಟೆಯಲ್ಲ, 14 ಗಂಟೆ ದುಡಿಯಬೇಕು
Economic Survey says that in 2022-23, foodgrain production hit an all-time high of 329.7 million tonnes, and oilseeds production reached 41.4 million tonnes
Read here: https://t.co/tv0cpxpxMS#EconomicSurvey2024 #ViksitBharatBudget2024_25 pic.twitter.com/KpfwlJIP2N
— PIB India (@PIB_India) July 22, 2024
* ಹೆಚ್ಚುತ್ತಿರುವ ಬಡ್ಡಿ ದರ, ಬೆಲೆ ಏರಿಕೆ ನಡುವೆ ಅಭಿವೃದ್ಧಿ ಕಾಣುತ್ತಿರುವ ಅತ್ಯುತ್ತಮ ಮಾರುಕಟ್ಟೆ ಭಾರತ.
* ಬಿಎಸ್‌ಇ ಸೆನ್ಸೆಕ್ಸ್ ಶೇ.25ರಷ್ಟು ಬೆಳವಣಿಗೆ ಕಂಡಿದ್ದು, 2025ರಲ್ಲೂ ಮುಂದುವರಿಕೆ ವಿಶ್ವಾಸ.
* ಜು.3ರಂದು 30 ಷೇರುಗಳ ಇಂಡೆಕ್ಸ್ ದಿನದ ವಹಿವಾಟು 80 ಸಾವಿರ ಗಡಿ ದಾಟಿ ಇತಿಹಾಸ ಸೃಷ್ಟಿ.
* ಸಮತೋಲಿತ, ವೈವಿಧ್ಯಮಯ ಆಹಾರದ ಕಡೆಗೆ ಪರಿವರ್ತನೆ ಅಗತ್ಯ.
▶️India’s external sector is being deftly managed with comfortable foreign exchange reserves and a stable exchange rate.
▶️Forex reserves as of the end of March 2024 were sufficient to cover 11 months of projected imports.
Read more: https://t.co/txxM8Fr5GO… pic.twitter.com/GLpUNIiWsb
— PIB India (@PIB_India) July 22, 2024
* 11.57 ಕೋಟಿ ಶೌಚಾಲಯಗಳು ಮತ್ತು 2.39 ಲಕ್ಷ ಸಮುದಾಯ ಶೌಚಾಲಯ ಸಂಕೀರ್ಣಗಳನ್ನು ಸ್ವಚ್ಛ ಭಾರತ್ ಮಿಷನ್-ಗ್ರಾಮೀನ್ ಅಡಿಯಲ್ಲಿ ನಿರ್ಮಾಣ
* 11.7 ಕೋಟಿ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರಿನ ಸಂಪರ್ಕ.
* 2015 ರಿಂದ ಸೌಭಾಗ್ಯ ಅಡಿಯಲ್ಲಿ 21.4 ಕೋಟಿ ಗ್ರಾಮೀಣ ಕುಟುಂಬಕ್ಕೆ ವಿದ್ಯುತ್ ಸಂಪರ್ಕ.