ಬೆಂಗಳೂರು: ವರ್ಷದ ಮೊದಲ ತಿಂಗಳಾದ ಜನವರಿಯಲ್ಲೇ ತಲಾ ಒಂದು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಜರುಗಲಿದೆ. ಜನವರಿ 6ರಂದು ಸೂರ್ಯಗ್ರಹಣ ಮತ್ತು 21ರಂದು ಚಂದ್ರಗ್ರಹಣ ಘಟಿಸಲಿವೆ. ಹಾಗಾಗಿ ನಭೋಮಂಡಲದ ಈ ವಿದ್ಯಮಾನ ಭೂಮಿಗೆ ಕಂಟಕಗಳನ್ನ ಹೊತ್ತು ಬರಲಿದೆಯಾ ಅನ್ನೋ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಮುಂದಿನ ದಿನಗಳ ಆಸುಪಾಸಿನಲ್ಲಿ ಪ್ರಕೃತಿ ಯಾವ ರೀತಿ ಕೆರಳಲಿದೆಯೋ ಎಂಬ ಭೀತಿ ಕಾಡೋದಕ್ಕೆ ಶುರುವಾಗಿದೆ.
ಹೊಸ ವರ್ಷದ ಗ್ರಹಣಗಳ ಬಗ್ಗೆ ಜೋತಿಷ್ಯ ಲೋಕ ಕೂಡಾ ಸಾಕಷ್ಟು ಕುತೂಹಲದಿಂದ ಇದ್ದು, 2019ರ ಭಯಾನಕ ಜಾತಕ ಬಿಚ್ಚಿಟ್ಟ ಆನಂದ ಗುರೂಜಿ ಈ ವಿದ್ಯಮಾನ ಅಪಾಯಕಾರಿ ಅಂತಾರೆ. ಭಾರತಕ್ಕೆ ಗ್ರಹಣ ಗೋಚರವಾಗುತ್ತೋ ಇಲ್ವೋ ಅನ್ನೋದಕ್ಕಿಂತ, ಗ್ರಹಣ ಸಮಯದಲ್ಲಿ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದೆಲ್ಲದರ ಮುನ್ಸೂಚನೆ ಎಂಬಂತೆಯೇ ಈಗಾಗಲೇ ವಿಶ್ವದಲ್ಲಿ ಕೆಲ ವಿನಾಶಕಾರಿ ಘಟನೆಗಳು ನಡೆಯುತ್ತಿವೆ ಅನ್ನೋದು ಅವರ ಅಭಿಪ್ರಾಯವಾಗಿದೆ.
Advertisement
Advertisement
2019ರ ಹೊಸ್ತಿಲಲ್ಲೆ ಸೌರಮಂಡಲದಲ್ಲಿ ಕೌತುಕದ ವಿದ್ಯಮಾನ ಏರ್ಪಡುತ್ತಿದೆ. ಇದು ಸಾಮಾನ್ಯ ವಿದ್ಯಮಾನದಂತೆ ಕಂಡು ಬಂದರೂ ಕರಾಳತೆಯನ್ನ ಪ್ರದರ್ಶಿಸುವ ಸಾಧ್ಯತೆಗಳು ಹೆಚ್ಚಿವೆ. ಹೊಸ ವರ್ಷದ ಆರಂಭದಲ್ಲೇ ಪೂರ್ಣ ಚಂದ್ರ ಗ್ರಹಣ ಬಂದಿದೆ. ಈ ಪೂರ್ಣ ಪ್ರಮಾಣದ ರಕ್ತ ಚಂದ್ರ ಗ್ರಹಣ ಪೂರ್ಣ ಪ್ರಮಾಣದಲ್ಲೇ ಅಪಾಯಗಳ ಆತಂಕವನ್ನ ಹುಟ್ಟುಹಾಕೋ ಸೂಚನೆಗಳು ನೀಡಿದಂತಿದೆ. 2019ರಲ್ಲೂ ಸಾಲು ಸಾಲು ಗ್ರಹಣಗಳಿದ್ದು, ಈ ಗ್ರಹಣಗಳೇ ಗಂಡಾಂತರಗಳನ್ನ ಹೊತ್ತು ಬರಲಿವೆ ಎನ್ನಲಾಗುತ್ತಿದೆ.
Advertisement
ಹೊಸ ವರ್ಷದಲ್ಲಿ 5 ಗ್ರಹಣಗಳಿದ್ದು, ಜನವರಿಯಲ್ಲೇ ಭೀಕರವಾದ ರಕ್ತ ಚಂದ್ರಗ್ರಹಣ ಎದುರಾಗಲಿದೆ. ಇದು ಜನರನ್ನ ಆತಂಕದ ಕೂಪಕ್ಕೆ ತಳ್ಳಿದೆ. ಈಗ ಭುಗಿಲೆದ್ದಿರುವ ಭೀಕರ ಭೂಕಂಪ, ಜಲಪ್ರಳಯಗಳಂತಹ ಪ್ರಾಕೃತಿಕ ವಿಕೋಪಗಳ ಮೇಲೆ ರಕ್ತ ಚಂದ್ರ ಗ್ರಹಣ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Advertisement
ವರ್ಷದ ಆರಂಭದಲ್ಲಿ ಗ್ರಹಣ ಎಫೆಕ್ಟ್:
ನಭೋಮಂಡಲದ ಪ್ರಕ್ರಿಯೆ ಭೂಮಿ ಮೇಲೆ ವ್ಯತಿರಿಕ್ತ ಪರಿಣಾಮವನ್ನ ಬೀರಲಿದೆ ಅನ್ನೋದನ್ನ ಸಾಕಷ್ಟು ಮಂದಿ ಹೇಳುತ್ತಾ ಬಂದಿದ್ದಾರೆ. ಈಗ ಭೂಮಿ ಮೇಲೆ ಆಗುತ್ತಿರುವ ಬೆಳವಣಿಗೆಗಳನ್ನ ನೋಡಿದ್ರೆ ನಿಜಕ್ಕೂ ಇವೆಲ್ಲಾ ವಿನಾಶಕಾರಿ ಬೆಳವಣಿಗೆಯಾ ಅಂತಾ ಅನ್ನಿಸದೇ ಇರೋದಿಲ್ಲ. ಮುಂದಾಗೋ ಗ್ರಹಣದ ಪ್ರಭಾವಕ್ಕೆ ಈಗಲೇ ಪ್ರಕೃತಿ ಕೆರಳಿ ನಿಂತಿದೆಯಾ ಅನ್ನೋ ಸಂಶಯನೂ ಕಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಭೂಮಿ ಮೇಲೆ ಯಾವಾಗ ಏನಾಗುತ್ತೆ ಅನ್ನೋದನ್ನ ಕರಾರುವಕ್ಕಾಗಿ ಹೇಳೋಕಾಗ್ತಿಲ್ಲ. ಅಂತಹದರಲ್ಲಿ ಹೊಸ ವರ್ಷಕ್ಕೆ ಕಾಲಿಡುವ ಹೊಸ್ತಿಲಲ್ಲೇ ಪ್ರಕೃತಿ ಪದೇ ಪದೇ ಕೆರಳುತ್ತಿದೆ ಶಾಂತವಾಗಿದ್ದ ಕಡಲು ಏಕಾಏಕಿ ಕೆರಳಿ ಅಬ್ಬರಿಸೋದಕ್ಕೆ ಶುರವಾಗುತ್ತೆ. ಸಮುದ್ರ ದಡಕ್ಕೆ ದೈತ್ಯ ಅಲೆಗಳು ಬಂದು ಅಪ್ಪಳಿಸಿ ಸಿಕ್ಕಿದ್ದನ್ನೆಲ್ಲಾ ರಕ್ಕಸ ಅಲೆ ಎಳೆದೊಯ್ಯುತ್ತಿದೆ. ಸುಪ್ತವಾಗಿರೋ ಅಗ್ನಿಪರ್ವತಗಳು ಏಕಾಏಕಿ ಸ್ಫೋಟವಾಗ್ತಿವೆ. ನಿಂತ ನೆಲವೇ ಕುಸಿದು ಬೀಳುವಂತೆ ಭೂಮಿ ಕಂಪಿಸುತ್ತಿದೆ.
ಗ್ರಹಣದ ಎಫೆಕ್ಟ್ ಗೆನೇ ವಿಶ್ವದೆಲ್ಲೆಡೆ ಭಯಾನಕವಾದಂತಹ, ವಿಚಿತ್ರವಾದ ಘಟನೆಗಳು ನಡೆಯುತ್ತಿವೆಯಂತೆ. ಪದೇ ಪದೇ ಇಂಡೋನೇಷ್ಯಾ ಮೇಲೆ ಸುನಾಮಿ ಉಗ್ರರೂಪ ತಾಳಿ ದಾಳಿ ಮಾಡುತ್ತಿದೆ. ಅಬ್ಬರಿಸಿದ ಸಮುದ್ರ ಸ್ವಲ್ಪವೂ ಗ್ಯಾಪ್ ಕೊಡದೇ ಪದೇ ಪದೇ ಕೆರಳುತ್ತಿದೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಕಸ ಅಲೆಗಳ ರಣಭೀಕರ ದಾಳಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಹುಣ್ಣಿಮೆ, ಜ್ವಾಲಾಮುಖಿ ಸ್ಫೋಟದಿಂದ ಕೆರಳಿದ ಅಲೆಗಳು ಸುನಾಮಿ ರೂಪ ತಾಳಿ ಅವಾಂತರ ಸೃಷ್ಟಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಪಿಲಿಫೈನ್‍ನಲ್ಲಿರುವ ಮಿಂಡನೌ ದ್ವೀಪದಲ್ಲಿ ಭೂಕಂಪನ ಉಂಟಾಗಿದೆ. ಸುಮಾರು 7 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಭೂಕಂಪನ ಉಂಟಾದ ಬೆನ್ನಲ್ಲೇ ಸಮುದ್ರದ ಅಲೆಗಳಲ್ಲಿ ಬದಲಾವಣೆ ಆಗಿ ಭಯಾನಕ ಅನುಭವ ನೀಡಿದೆ.
ಹೊಸ ವರ್ಷದ ಮೊದಲ ತಿಂಗಳಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದ್ದು ವರ್ಷಪೂರ ಅದ್ಯಾವ ಗ್ರಹಗತಿಗಳು ಈ ದೇಶವನ್ನ ಕಾಡಲಿದೆಯೋ ಅನ್ನೋದು ಮತ್ತೊಂದು ಆತಂಕ. ಅಲ್ಲದೇ ಜನವರಿ 21ರಂದು ಸೌರ ಮಂಡಲದಲ್ಲಿ ನಡೆಯೋ ಕೌತುಕ ಮುಂದಿನ ದಿನಗಳಲ್ಲಿ ಭಾರೀ ಗಂಡಾತರವನ್ನು ಸೃಷ್ಟಿಸಲಿದ್ಯಂತೆ. ವಿಜ್ಞಾನಿಗಳೇನೋ ಎಂದಿನಂತೆ ಇಂದೊಂದು ಕ್ರಿಯೆ ಭಯ ಪಡೋ ಅಗತ್ಯವೇ ಇಲ್ಲ ಅಂತ ಸುಮ್ಮನಾದ್ರೂ ಕೂಡಾ, ಸಂಖ್ಯಾಶಾಸ್ತ್ರಜ್ಞರು, ಜೋತಿಷ್ಯಿಗಳು ಮಾತ್ರ ವಿನಾಶ ಕಾಲ ಹತ್ತಿರವಾಯ್ತು ಅಂತಲೇ ಭವಿಷ್ಯ ನುಡಿಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv