ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K Chandrashekhar Rao) ಅವರ ತೆಲಂಗಾಣ ರಾಷ್ಟ್ರ ಸಮಿತಿ (Telangana Rashtra Samithi) ಪಕ್ಷದ ಹೆಸರು ಬದಲಾವಣೆಯಾಗಿದೆ. ಈ ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ (Bharat Rashtra Samithi) ಎಂದು ಮರುನಾಮಕರಣ ಮಾಡಲಾಗಿದೆ.
ಕೆಸಿಆರ್ (KCR) ಪಕ್ಷದ ಹೊಸ ಹೆಸರಿಗೆ ಕೇಂದ್ರ ಚುನಾವಣಾ ಆಯೋಗ (Election Commission of India) ಒಪ್ಪಿಗೆ ಸೂಚಿಸಿದೆ. ಟಿಆರ್‌ಎಸ್ (TRS) ಹೆಸರನ್ನು ಬಿಆರ್‌ಎಸ್ (BRS) ಎಂದು ಬದಲಾಯಿಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ಔಪಚಾರಿಕವಾಗಿ ಅನುಮೋದನೆ ನೀಡಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ
Advertisement
ECI accepts the change in the name of 'Telangana Rashtra Samithi' (TRS) to 'Bharat Rashtra Samithi'. pic.twitter.com/VZgDptxVvZ
— ANI (@ANI) December 8, 2022
Advertisement
ಪಕ್ಷದ ಹೆಸರು ಬದಲಾವಣೆ ಕುರಿತು ಆಯೋಗವು ಶೀಘ್ರದಲ್ಲೇ ಅಗತ್ಯ ಅಧಿಸೂಚನೆ ಹೊರಡಿಸಲಿದೆ. ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಪತ್ರ ಬರೆದು ಗುರುವಾರ ಈ ಕುರಿತು ಮಾಹಿತಿ ನೀಡಿದೆ.
Advertisement
Advertisement
ಪಕ್ಷದ ಹೆಸರನ್ನು ಔಪಚಾರಿಕವಾಗಿ ಬದಲಾಯಿಸಲು ಶುಕ್ರವಾರ ಮಧ್ಯಾಹ್ನ 1:20 ಕ್ಕೆ ಸಮಾರಂಭಕ್ಕೆ ವ್ಯವಸ್ಥೆ ಮಾಡುವಂತೆ ಚಂದ್ರಶೇಖರ ರಾವ್ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: Gujarat Election Result: ಜಿಗ್ನೇಶ್ ಮೇವಾನಿಗೆ ಜಯ