ನವದೆಹಲಿ: ಕರ್ನಾಟಕ ಚುನಾವಣಾ ಹೊಸ್ತಿಲಿನಲ್ಲಿದೆ. ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ನ ಕೈ ಚಿಹ್ನೆಯನ್ನು ತೆಗೆಯುವಂತೆ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ದೂರಿನ ವಿಚಾರಣೆ ಏಪ್ರಿಲ್ 18ರಂದು ನಡೆಯಲಿದೆ.
ಕಾಂಗ್ರೆಸ್ ಹಸ್ತ ಚಿಹ್ನೆ ಹೊಂದಿರುವ ಕಾರಣ ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಚುನಾವಣಾ ಆಯೋಗಕ್ಕೆ ಜನವರಿ ತಿಂಗಳಿನಲ್ಲಿ ದೂರು ನೀಡಿದ್ದರು.
Advertisement
ಕೈ ದೇಹದ ಭಾಗವಾಗಿರುವುದರಿಂದ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ದೂರು ನೀಡಿದ್ದೆ. ಆಯೋಗ ದೂರನ್ನು ಸ್ವೀಕರಿಸಿದೆ. ಉಪ ಚುನಾವಣಾ ಆಯುಕ್ತ ಭೂಷಣ್ ಚಂದ್ರ ಕುಮಾರ್ ಅವರು ವಿಚಾರಣೆ ನಡೆಸಲಿದ್ದಾರೆ ಎಂದು ಅಶ್ವಿನಿ ಉಪಾಧ್ಯಾಯ ತಿಳಿಸಿದ್ದಾರೆ.
Advertisement
ಚುನಾವಣೆ ನಡೆಯುವ 48 ಘಂಟೆಗಳ ಮೊದಲು, ಚುನಾವಣೆಯ ದಿನ, ಮತ ಕೇಂದ್ರದಿಂದ 100 ಮೀಟರ್ ಒಳಗೆ ಯಾರು ಪ್ರಚಾರ ಮಾಡುವಂತಿಲ್ಲ. ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಕಾಂಗ್ರೆಸ್ ಚಿಹ್ನೆ ಕೈ ಆಗಿರುವುದರಿಂದ ಮತ ಕೇಂದ್ರಗಳಲ್ಲಿ ಕೂರುವ ಪಕ್ಷದ ವೀಕ್ಷಕರು ಕೂಡ ಕೈ ತೋರಿಸಿ ಮತದಾರರಿಗೆ ಸನ್ನೆ ಮಾಡಬಹುದಾಗಿದೆ. ಎಲ್ಲ ಚುನಾವಣೆಯಲ್ಲಿ ಇದು ಉಲ್ಲಂಘನೆ ಆಗುತ್ತಿರುವ ಕಾರಣ ಕೈ ಚಿಹ್ನೆಯನ್ನು ತೆಗೆಯುವಂತೆ ದೂರಿನಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
Advertisement
ಈ ಮೊದಲು ಎತ್ತಿನ ಬಂಡಿ, ಹಸು ಮತ್ತು ಕರು ಕಾಂಗ್ರೆಸ್‍ನ ಚಿಹ್ನೆಗಳಾಗಿದ್ದವು ಎಂದು ದೂರಿನಲ್ಲಿ ದೂರುದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.