– ಡಿ.4 ರಂದು ಫಲಿತಾಂಶ ಪ್ರಕಟ: ಚುನಾವಣಾ ಆಯೋಗ
ನವದೆಹಲಿ: ಮಿಜೋರಾಂ (Mizoram) ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಡಿಸೆಂಬರ್ 3 (ಭಾನುವಾರ) ರಿಂದ ಡಿಸೆಂಬರ್ 4 (ಸೋಮವಾರ)ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ (Election Commission) ಶುಕ್ರವಾರ ಪ್ರಕಟಿಸಿದೆ.
Advertisement
ಮಿಜೋರಾಂನಲ್ಲಿ ಮತ ಎಣಿಕೆಯ ದಿನದ ಬದಲಾವಣೆಗಾಗಿ ವಿವಿಧ ವಲಯಗಳಿಂದ ಮನವಿ ಸಲ್ಲಿಕೆಯಾಗಿತ್ತು. ಅದನ್ನು ಪರಿಗಣಿಸಿ ಆಯೋಗ ಮತ ಎಣಿಕೆ ದಿನಾಂಕ ಬದಲಾವಣೆಯನ್ನು ಘೋಷಿಸಿತು. ಇದನ್ನೂ ಓದಿ: ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ
Advertisement
Advertisement
ಕ್ರಿಶ್ಚಿಯನ್ ಸಮುದಾಯದವರೇ ಹೆಚ್ಚಿರುವ ಮಿಜೋರಾಂನ ಜನರಿಗೆ ಡಿಸೆಂಬರ್ 3 ರ ಭಾನುವಾರ ವಿಶೇಷ ದಿನವಾಗಿದೆ. ಈ ಪ್ರಾತಿನಿಧ್ಯ ಪರಿಗಣಿಸಿದ ಆಯೋಗವು ಮತ ಎಣಿಕೆ ದಿನಾಂಕವನ್ನು ಡಿ.4 ಕ್ಕೆ ಬದಲಾಯಿಸಲು ನಿರ್ಧರಿಸಿದೆ.
Advertisement
ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ನಡೆದಿದ್ದು, ಡಿಸೆಂಬರ್ 4 ರಂದು ಮತ ಎಣಿಕೆ ನಡೆಯಲಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಡಿಸೆಂಬರ್ 3 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗವು ಈ ಹಿಂದೆ ಪ್ರಕಟಿಸಿತ್ತು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು – ಇದು ಟುಡೇಸ್ ಚಾಣಕ್ಯ ಭವಿಷ್ಯ