ವಾಷಿಂಗ್ಟನ್: ಕೊರೊನಾದಿಂದ ಜನರು ಇದೀಗ ಸಹಜ ಸ್ಥಿತಿಗೆ ಜನರು ಮರಳುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಅಮೆರಿಕದಲ್ಲಿ ಸಾಲ್ಮೊನೆಲ್ಲಾ(Salmonella) ಬ್ಯಾಕ್ಟಿರಿಯಾ ಸೋಂಕು ಹರಡಿರುವ ಈರುಳ್ಳಿಯನ್ನು ಸೇವಿಸಿ 650 ಮಂದಿ ಅಸ್ವಸ್ಥರಾಗಿರುವ ಘಟನೆ ಅಮೆರಿಕಾರಿದಲ್ಲಿ ಆತಂಕವನ್ನು ಸೃಷ್ಟಿಮಾಡಿದೆ.
Advertisement
ಮೆಕ್ಸಿಕೋದ(Mexico) ಚಿವಾವಾ ದಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ಹಸಿಯಾಗಿ ಸೇವಿಸಿದ ಜನರಿಗೆ ಈ ಸೋಂಕು ಹರಡಿದೆ. ಪ್ರೋಸೋರ್ಸ್ ಎಂಬ ಕಂಪನಿ ಈ ಈರುಳ್ಳಿ ಆಮದು ಮಾಡಿಕೊಂಡು ಮಾರಾಟ ಮಾಡಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್‍ನಿಂದಲೇ ದೇಶದಲ್ಲಿ ರೋಗ ಹರಡುತ್ತಿದ್ದು, ಟೆಕ್ಸಾಸ್(Texas) ಮತ್ತು ಓಕ್ಲಹಾಮಾದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿದ್ದಾರೆ. 129 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ
Advertisement
Advertisement
ಅನಾರೋಗ್ಯಪೀಡಿತರಲ್ಲಿ ಶೇ.75ರಷ್ಟು ಜನರು ತಾವು ಹಸಿ ಈರುಳ್ಳಿ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈರುಳ್ಳಿಯನ್ನು ತಿಂಗಳುಗಟ್ಟಲೆ ಇಡುವುದರಿಂದ ಜನರ ಬಳಿ ಈಗಲೂ ಸೋಂಕಿತ ಈರುಳ್ಳಿ ಇರಬಹುದು. ಕೆಂಪು, ಹಳದಿ ಮತ್ತು ಬಿಳಿ ಈರುಳ್ಳಿಗಳು ಮನೆಯಲ್ಲಿದ್ದರೆ ಎಸೆದುಬಿಡಿ ಎಂದು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲಿನ ಜನರು ಭಯಗೊಂಡು ಮನೆಯಲ್ಲಿರುವ ಈರುಳ್ಳಿಯನ್ನು ಎಸೆಯುತ್ತಿದ್ದಾರೆ. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್
Advertisement
ಹೊಸ ಸೋಂಕು ಅಮೆರಿಕದಲ್ಲಿ ಈಗ ಆತಂಕ ಸೃಷ್ಟಿಸಿದೆ. ಆಮದು ಮಾಡಲಾಗಿದ್ದ ಈರುಳ್ಳಿಯನ್ನು ಹಿಂಪಡೆಯುವುದಾಗಿ ಹೇಳಿದೆ. ಜುಲೈ 1 ರಿಂದ ಆಗಸ್ಟ್ 27ರವರೆಗೆ ಆಮದು ಮಾಡಿದ ಎಲ್ಲಾ ಈರುಳ್ಳಿಯನ್ನು ಸ್ವಯಂಪ್ರೇರಣೆಯಿಂದ ವಾಪಸ್ ಪಡೆಯಲು ಪ್ರೋಸೋರ್ಸ್ ಕಂಪನಿ ಒಪ್ಪಿಕೊಂಡಿದೆ ಎಂದು ಆಹಾರ ನೀತಿ ಮತ್ತು ಔಷಧ ಆಡಳಿತದ ಉಪ ಆಯುಕ್ತ ಫ್ರಾಂಕ್ ಯಿಯಾನಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.