ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯ್ ಕುಮಾರ್ ಗವಿತ್(Vijay Kumar Gavit), ಆಡಿರುವ ಮಾತು ಈಗ ಸಖತ್ ವೈರಲ್ ಆಗಿದೆ. ಮಂಗಳೂರಿನ ಚೆಲುವೆ, ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai) ಬಗ್ಗೆ ಸಚಿವ ವಿಜಯ್ ಕುಮಾರ್ ನೀಡಿರುವ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ. ಪ್ರತಿ ನಿತ್ಯ ನೀವು ಮೀನು(Fish) ತಿನ್ನಿ ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಆಗುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳಿನ ‘ಜಂಟಲ್‌ಮ್ಯಾನ್ 2’ನಲ್ಲಿ ಸುಧಾರಾಣಿ
ಕಾರ್ಯಕ್ರಮವೊಂದಲ್ಲಿ ಸಚಿವ ವಿಜಯ್ ಕುಮಾರ್ ಗವಿತ್ ಐಶ್ವರ್ಯಾ ರೈ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯಾ ರೈ ಅವರು ಪ್ರತಿ ದಿನ ಮೀನು ತಿನ್ನುವುದರಿಂದ ಸುಂದರವಾದ ಕಣ್ಣುಗಳನ್ನು ಹೊಂದಿದ್ದಾರೆ. ನೀವೂ ಕೂಡ ಪ್ರತಿ ದಿನ ಮೀನು ತಿಂದರೆ ನಿಮ್ಮ ಕಣ್ಣುಗಳು (Eyes) ಕೂಡ ಸುಂದರವಾಗಿರುತ್ತದೆ ಎಂದು ವಿಜಯ್ ಕುಮಾರ್ ಗವಿತ್ ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆಯಿಂದ ಅಲ್ಲಿದ್ದವರ ಹುಬ್ಬೇರಿಸಿತು.
ನೀವು ಐಶ್ವರ್ಯಾ ರೈ ಅವರನ್ನು ನೋಡಿದ್ದೀರಾ ಅವರು ಪ್ರತಿ ದಿನ ಮೀನು ತಿನ್ನುತ್ತಿದ್ದರು. ಅವರ ಕಣ್ಣುಗಳನ್ನು ನೋಡಿದ್ದೀರಾ ಮೀನು ತಿನ್ನುವುದರಿಂದ ಎರಡು ಪ್ರಯೋಜನಗಳಿವೆ. ಮಹಿಳೆಯರು ಸ್ಲಿಮ್ ಆಗುತ್ತಾರೆ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಮೀನಿನಲ್ಲಿ ಇರುವ ಒಂದು ತೈಲದಿಂದ ಇದು ಸಾಧ್ಯ. ನಿಮ್ಮ ಕಣ್ಣು ಮತ್ತು ತ್ವಚೆ ಕಾಂತಿಯುತವಾಗಿ ಕಾಣುತ್ತವೆ ಎಂದು ವಿಜಯ್ ಕುಮಾರ್ ಗವಿತ್ ಹೇಳಿದ್ದಾರೆ.
ಒಟ್ನಲ್ಲಿ ಸಚಿವ ವಿಜಯ್ ಕುಮಾರ್ ಅವರು ಆಡಿರುವ ಮಾತು ಈಗ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಅವರ ಮಾತಿಗೆ ಅನೇಕರು ಕಾಲೆಳೆದಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]