ಅಂಗಡಿಗಳಲ್ಲಿ ಸಿಗುವ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಕಾಜು ಬರ್ಫಿ (Kaju Barfi) ಹೇಸರು ಕೇಳಿದರೇನೇ ಬಾಯಲ್ಲಿ ನೀರು ಬರುತ್ತದೆ. ಇಂತಹ ಕಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಗೋಡಂಬಿ – 1 ಕಪ್
ಸಕ್ಕರೆ – ಅರ್ಧ ಕಪ್
ನೀರು – ಅರ್ಧ ಕಪ್
ತುಪ್ಪ – 1 ಚಮಚ
ರೋಸ್ ವಾಟರ್ ಅಥವಾ ಕೇಸರಿ – 1 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಗೋಡಂಬಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ.
* ಗೋಡಂಬಿ ಒಣಗಿದ ಬಳಿಕ ನೀರಿನ ಪಸೆ ಇಲ್ಲದ ಮಿಕ್ಸರ್ ಜಾರ್‌ನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
* ಒಂದು ಪ್ಯಾನ್‌ನಲ್ಲಿ ನೀರು ಮತ್ತು ಸಕ್ಕರೆ ಹಾಕಿ ಸಣ್ಣನೆಯ ಉರಿಯಲ್ಲಿ ಬಿಸಿ ಮಾಡಿ. ಸಕ್ಕರೆ ಪೂರ್ತಿಯಾಗಿ ನೀರಿನಲ್ಲಿ ಕರಗಿ ದಪ್ಪಗಾಗುವವರೆಗೆ ಕುದಿಸಿರಿ.
* ನಂತರ ಗೋಡಂಬಿ ಪುಡಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಕೆಂದಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬಹುದು).
* ಸುಮಾರು 5-10 ನಿಮಿಷಗಳವರೆಗೆ ಗೋಡಂಬಿ ಪುಡಿಯನ್ನು ಸಣ್ಣ ಉರಿಯಲ್ಲಿ ನಿಧಾನವಾಗಿ ಕದಡುತ್ತಾ ಇರಿ. ಮಿಶ್ರಣ ನಿಧಾನವಾಗಿ ದಪ್ಪಗಾಗುತ್ತಾ ಬರುತ್ತದೆ. ನಂತರ ಸ್ಟೌವ್‌ನಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
* ಈಗ ಒಂದು ಪ್ಲೇಟ್‌ಗೆ ಸ್ವಲ್ಪ ತುಪ್ಪ ಸವರಿ ಇಟ್ಟುಕೊಳ್ಳಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಸಿಹಿಯಾದ ಹಯಗ್ರೀವ
Advertisement
Advertisement
* ಈಗ ಪ್ಯಾನ್‌ನಿಂದ ಗೋಡಂಬಿ ಮಿಶ್ರಣವನ್ನು ಇಳಿಸಿ, ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಸ್ವಲ್ಪ ತುಪ್ಪ, ರೋಸ್ ವಾಟರ್ ಅಥವಾ ಕೇಸರಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಗೋಡಂಬಿ ಹಿಟ್ಟನ್ನು ಚೆನ್ನಾಗಿ ನಾದಿ.
* ನಾದಿದ ಗೋಡಂಬಿ ಹಿಟ್ಟನ್ನು ತುಪ್ಪ ಸವರಿದ ಪ್ಲೇಟ್‌ಗೆ ಸಮತಟ್ಟಾಗಿ ಹಾಕಬೇಕು. ನಂತರ ಲಟ್ಟಣಿಗೆಯ ಸಹಾಯದಿಂದ ನಿಧಾನವಾಗಿ ಹಿಟ್ಟಿನ ಮೇಲೆ ಸ್ವಲ್ಪ ದಪ್ಪ ಬರುವವರೆಗೆ ರೋಲ್ ಮಾಡಿ.
* ಈಗ ಒಂದು ಚಾಕುವಿನಿಂದ ಗೋಡಂಬಿ ಮಿಶ್ರಣವನ್ನು ವಜ್ರಾಕೃತಿಯಲ್ಲಿ ಕತ್ತರಿಸಿಕೊಳ್ಳಿ ಮತ್ತು ಹಿಟ್ಟು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
* ಈಗ ರುಚಿರುಚಿಯಾದ ಕಾಜು ಬರ್ಫಿ ಸವಿಯಲು ರೆಡಿಯಾಗಿದ್ದು, ಇನ್ನು 5-6 ದಿನಗಳವರೆಗೆ ಸವಿಯಬಹುದು. ಫ್ರಿಡ್ಜ್ನಲ್ಲಿಟ್ಟರೆ ಸುಮಾರು 1 ತಿಂಗಳು ಕೆಡುವುದಿಲ್ಲ. ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ಮನೆಯಲ್ಲಿಯೇ ಮಾಡಿ ರಸಭರಿತ ರಸಗುಲ್ಲ