ಮಕ್ಕಳು ಯಾವಾಗಲೂ ಇಷ್ಟ ಪಟ್ಟು ತಿನ್ನುವ ತಿನಿಸು ಕೇಕ್ (Cake). ಇಂದು ನಾವು ತುಂಬಾ ಸುಲಭವಾಗಿ ಬಾದಾಮಿ ಕೇಕ್ (Almond Cake) ಅನ್ನು ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಇದನ್ನು ಮನೆಯಲ್ಲಿ ಮಾಡಿ, ಮಕ್ಕಳಿಗೆ ನೀಡಿ.
Advertisement
ಬೇಕಾಗುವ ಪದಾರ್ಥಗಳು:
ಸಕ್ಕರೆ ಪುಡಿ – ಒಂದೂವರೆ ಕಪ್
ಹಾಲು – ಮುಕ್ಕಾಲು ಕಪ್
ಮೊಟ್ಟೆ – 1
ಬಾದಾಮಿ ಸಾರ – 2 ಟೀಸ್ಪೂನ್
ಮೈದಾ ಹಿಟ್ಟು – ಒಂದೂವರೆ ಕಪ್
ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಬೆಣ್ಣೆ – ಅರ್ಧ ಕಪ್
ಕತ್ತರಿಸಿದ ಬಾದಾಮಿ – ಕಾಲು ಕಪ್ ಇದನ್ನೂ ಓದಿ: ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕೇಕ್ ತಯಾರಿಸುವ ಪಾತ್ರೆಗೆ ಬಟರ್ ಪೇಪರ್ ಹಾಕಿ, ಅದರಲ್ಲಿ ಕತ್ತರಿಸಿದ ಬಾದಾಮಿಯನ್ನು ಹರಡಿ ಪಕ್ಕಕ್ಕಿಡಿ.
* ಒಂದು ಮಧ್ಯಮ ಗಾತ್ರದ ಪಾತ್ರೆಯಲ್ಲಿ ಸಕ್ಕರೆ, ಹಾಲು, ಮೊಟ್ಟೆ, ಬಾದಾಮಿ ಸಾರವನ್ನು ಹಾಕಿ ಮಿಕ್ಸ್ ಮಾಡಿ.
* ಈಗ ಅದಕ್ಕೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಹಾಗೂ ಉಪ್ಪು ಸೇರಿಸಿ, ಮಿಕ್ಸ್ ಮಾಡಿ.
* ಬೆಣ್ಣೆಯನ್ನು ಕರಗಿಸಿ ಮಿಶ್ರಣಕ್ಕೆ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ.
* ಈಗ ಮೊದಲೇ ಸಿದ್ದಪಡಿಸಿದ್ದ ಕೇಕ್ ತಯಾರಿಸುವ ಪಾತ್ರೆಗೆ ಹಿಟ್ಟನ್ನು ಸುರಿಯಿರಿ.
* ಓವನ್‌ನಲ್ಲಿ ಕೇಕ್ ಪಾತ್ರೆಯನ್ನಿರಿಸಿ, 350 ಡಿಗ್ರಿ ಬಿಸಿಯಲ್ಲಿ ಸುಮಾರು 35-40 ನಿಮಿಷಗಳ ವರೆಗೆ ಬೇಯಿಸಿ.
* ಈಗ ಓವನ್‌ನಿಂದ ಕೇಕ್ ಅನ್ನು ತೆಗೆದು, ಆರಲು ಬಿಡಿ.
* ನಿಧಾನವಾಗಿ ಕೇಕ್ ಅನ್ನು ಪಾತ್ರೆಯಿಂದ ಬೇರ್ಪಡಿಸಿ.
* ಈಗ ಪುಡಿ ಸಕ್ಕರೆಯನ್ನು ಕೇಕ್ ಮೇಲೆ ಸಿಂಪಡಿಸಿ.
* ಇದೀಗ ಬಾದಾಮಿ ಕೇಕ್ ತಯಾರಾಗಿದ್ದು, ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?