ಊಟಕ್ಕೆ, ಅಥವಾ ಫ್ರೀ ಟೈಮ್‌ನಲ್ಲಿ ತಿನ್ನಲು ಹಪ್ಪಳ ತುಂಬಾ ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲೂ ವಿವಿಧ ರೀತಿಯ ಹಪ್ಪಳವನ್ನು ನೀವು ನೋಡಿರುತ್ತೀರಿ. ಇದನ್ನು ಮನೆಯಲ್ಲೂ ತುಂಬಾ ಸುಲಭವಾಗಿ ತಯಾರಿಸಬಹುದು. ನಾವಿಂದು ಆಲೂಗಡ್ಡೆ ಹಾಗೂ ಅಡುಗೆ ಮನೆಯಲ್ಲಿ ಸಿಗೋ ಕೆಲ ಸಿಂಪಲ್ ಸಾಮಾಗ್ರಿಗಳಿಂದ ಹಪ್ಪಳವನ್ನು ಹೇಗೆ ಮಾಡೋದು ಎಂಬುದನ್ನು ಹೇಳಿಕೊಡುತ್ತೇವೆ. ಆಲೂಗಡ್ಡೆ ಹಪ್ಪಳದ ಸಿಂಪಲ್ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 1 ಕೆಜಿ
ಕಲ್ಲುಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನಪುಡಿ – 2 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಎಣ್ಣೆ – ಹಪ್ಪಳ ತಯಾರಿಸಲ ಬೇಕಾಗುವಷ್ಟು ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿ.
* ಅದಕ್ಕೆ ಕಲ್ಲುಪ್ಪು, ಕೆಂಪು ಮೆಣಸಿನಪುಡಿ ಹಾಗೂ ಜೀರಿಗೆ ಸೇರಿಸಿ ಹಿಟ್ಟಿನಂತೆ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಮಿಶ್ರಣದಿಂದ ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿ.
* ಎರಡು ಪ್ಲಾಸ್ಟಿಕ್ ಹಾಳೆಗಳನ್ನು ತೆಗೆದುಕೊಳ್ಳಿ. ಒಂದು ಹಾಳೆಯ ಮೇಲ್ಭಾಗದಲ್ಲಿ ಸ್ವಲ್ಪ ಎಣ್ಣೆ ಸವರಿ, ಅದರ ಮೇಲೆ ಆಲೂಗಡ್ಡೆಯ ಉಂಡೆಯನ್ನಿಟ್ಟು, ಅದರ ಮೇಲೆ ಮತ್ತೆ ಎಣ್ಣೆ ಸವರಿದ ಮತ್ತೊಂದು ಪ್ಲಾಸ್ಟಿಕ್ ಹಾಳೆಯನ್ನಿಡಿ.
* ಈಗ ನಿಧಾನವಾಗಿ ಕೈಗಳಿಂದ ಒತ್ತಿಕೊಂಡು ತೆಳ್ಳಗಿನ ಪೂರಿಯಂತೆ ಮಾಡಿ. ನಿಮ್ಮ ಬಳಿ ರೋಲಿಂಗ್ ಪಿನ್ ಇದ್ದರೆ ಲಟ್ಟಿಸಲು ಅದನ್ನು ಬಳಸಬಹುದು.
* ಈಗ ಪ್ಲಾಸ್ಟಿಕ್‌ನಿಂದ ಹಪ್ಪಳವನ್ನು ನಿಧಾನವಾಗಿ ಬೇರ್ಪಡಿಸಿ, ಒಂದು ದೊಡ್ಡ ಪ್ಲಾಸ್ಟಿಕ್ ಹಾಳೆಯಲ್ಲಿ ಹರಡಿ. ಎಲ್ಲಾ ಹಪ್ಪಳವನ್ನು ಹೀಗೇ ಮುಂದುವರಿಸಿ, ದೊಡ್ಡ ಪ್ಲಾಸ್ಟಿಕ್ ಹಾಳೆಯಲ್ಲಿ ಜೋಡಿಸಿಕೊಳ್ಳಿ.
* ಈಗ ಹಪ್ಪಳವನ್ನು ಜೋಡಿಸಿದ ಪ್ಲಾಸ್ಟಿಕ್ ಹಾಳೆಯನ್ನು ಸೂರ್ಯನ ಬಿಸಿಲಿನಲ್ಲಿ ಇಡಿ. ಹಪ್ಪಳ ಎರಡೂ ಬದಿ ಚೆನ್ನಾಗಿ ಒಣಗಲು ಒಂದೆರಡು ದಿನ ಬೇಕಾಗಬಹುದು.
* ಹಪ್ಪಳ ಸಂಪೂರ್ಣ ಒಣಗಿದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಿ. ನಿಮಗೆ ಬೇಕೆನಿಸಿದಾಗ ಇದನ್ನು ಬಿಸಿ ಎಣ್ಣೆಯಲ್ಲಿ ಹುರಿದುಕೊಂಡು ಸವಿಯಬಹುದು. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್
Web Stories