ಗಣೇಶ ಚತುರ್ಥಿಗೆ ವಿವಿಧ ರೀತಿಯ ತಿಂಡಿಗಳನ್ನು ಮನೆಯಲ್ಲಿ ಮಾಡಬೇಕಾಗುತ್ತದೆ. ಈ ಸಂದರ್ಭ ಸುಲಭವಾಗಿ ಹಾಗೂ ಆದಷ್ಟು ಬೇಗನೆ ಮಾಡುವಂತಹ ತಿಂಡಿಗಳ ಆಯ್ಕೆ ಹೊಳೆಯುದೇ ವಿರಳ. ಎಲ್ಲವನ್ನೂ ಬೇಕರಿಯಿಂದಲೇ ತಂದರೆ ಅದು ಹಬ್ಬ ಹೇಗೆ? ಕೇವಲ ಅರ್ಧ ಗಂಟೆಯಲ್ಲಿ ಮಾಡಬಹುದಾದ ಗರಿಗರಿಯಾದ ಚಕ್ಕುಲಿಯನ್ನು ನೀವು ಕೂಡಾ ಮನೆಯಲ್ಲಿಯೇ ತಯಾರಿಸಿ. ಹಬ್ಬವನ್ನು ಹೋಮ್ ಮೇಡ್ ಅಡುಗೆಯಿಂದಲೇ ಆಚರಿಸಿ.
Advertisement
ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು – 2 ಕಪ್
ಮೈದಾ – 1 ಕಪ್
ಉಪ್ಪು – 1 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಎಳ್ಳು – 2 ಟೀಸ್ಪೂನ್
ಇಂಗು – 1 ಚಿಟಕೆ
ಉಪ್ಪು – 1 ಟೀಸ್ಪೂನ್
ನೀರು – ಬೆರೆಸಲು
ಎಣ್ಣೆ – ಹುರಿಯಲು ಇದನ್ನೂ ಓದಿ: ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಮೈದಾ ಮತ್ತು ಉಪ್ಪು ಹಾಕಿ ಕಲಸಿ.
* ಬಳಿಕ ಅರಿಶಿನ, ಕೆಂಪು ಮೆಣಸಿನ ಪುಡಿ, ಎಳ್ಳು ಹಾಗೂ ಚಿಟಿಕೆ ಇಂಗನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಬೆಣ್ಣೆಯನ್ನು ಸೇರಿಸಿ, ಹಿಟ್ಟು ಬೆಣ್ಣೆಯೊಂದಿಗೆ ಚೆನ್ನಾಗಿ ಸಂಯೋಜಿಸುವವರೆಗೆ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಮೃದು ಹಾಗೂ ನಯವಾದ ಹಿಟ್ಟನ್ನಾಗಿ ಮಾಡಿಕೊಳ್ಳಿ.
* ಈಗ ಚಕ್ಕುಲಿ ತಯಾರಿಸಲು ಸ್ಟಾರ್ ಮೌಲ್ಡ್ ತೆಗೆದುಕೊಳ್ಳಿ. ಚಕ್ಕುಲಿ ಮೇಕರ್ ಒಳ ಭಾಗದಲ್ಲಿ ಸ್ವಲ್ಪ ಎಣ್ಣೆ ಸವರಿ.
* ಈಗ ಹಿಟ್ಟನ್ನು ಸಿಲಿಂಡರ್ ಆಕಾರದಲ್ಲಿ ಕಟ್ಟಿ, ಚಕ್ಕುಲಿ ಮೇಕರ್ ಒಳಗೆ ಹಾಕಿ. ಒದ್ದೆ ಬಟ್ಟೆ ಅಥವಾ ಬಟರ್ ಶೀಟ್ ಮೇಲೆ ಸುರುಳಿಯಾಕಾರದಲ್ಲಿ ಹಿಟ್ಟನ್ನು ಒತ್ತಿ, ಚಕ್ಕುಲಿ ತಯಾರಿಸಿ.
* ಈಗ ಒಂದೊಂದೇ ಚಕ್ಕುಲಿಯನ್ನು ಕಾದ ಎಣ್ಣೆಯಲ್ಲಿ ಹಾಕಿ, ಎರಡೂ ಬದಿಯಲ್ಲಿ ಗರಿಗರಿಯಾಗಿ ಹುರಿಯಿರಿ.
* ಚಕ್ಕುಲಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಅವುಗಳನ್ನು ಎಣ್ಣೆಯಿಂದ ತೆಗೆದು, ಟಿಶ್ಯು ಪೇಪರ್‌ಮೇಲೆ ಹಾಕಿ.
* ಗರಿಗರಿಯಾದ ಚಕ್ಕುಲಿ ಈಗ ತಯಾರಾಗಿದ್ದು, ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಡಿ. 2 ವಾರಗಳ ವರೆಗೆ ಚಕ್ಕುಲಿಯನ್ನು ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?