ಸಿಂಪಲ್ಲಾಗಿ ಮಾಡಿ ಬಾದಾಮಿ ಟಾಫಿ ಬಾರ್ಸ್

Public TV
1 Min Read
Almond Toffee Bars 2

ಬಾದಾಮಿ ಟಾಫಿ ಬಾರ್ಸ್ ಬೆಣ್ಣೆಯಂತಹ ಕ್ರಸ್ಟ್ ಜೊತೆಗೆ ಕುರುಕಲಾದ ಬಾದಾಮಿಗಳನ್ನು ಬಳಸಿ ಮಾಡುವ ಸಿಹಿ. ಇದನ್ನು ನೀವೊಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನೋಣ ಎಂದೆನಿಸುತ್ತದೆ ಖಂಡಿತಾ. ಮಕ್ಕಳಿಗಂತೂ ಟಾಫಿ ಎಂದರೆ ಪಂಚಪ್ರಾಣ. ಅವರಿಗಾಗಿ ಬಾದಾಮಿ ಟಾಫಿ ಬಾರ್ಸ್ ನೀವೂ ಮಾಡಿ ಸವಿಯಲು ನೀಡಿ.

Almond Toffee Bars

ಬೇಕಾಗುವ ಪದಾರ್ಥಗಳು:
ಕ್ರಸ್ಟ್ ತಯಾರಿಸಲು:
ಹಿಟ್ಟು – ಒಂದೂವರೆ ಕಪ್
ಸಕ್ಕರೆ ಪುಡಿ – ಅರ್ಧ ಕಪ್
ಬೆಣ್ಣೆ – ಅರ್ಧ ಕಪ್
ಫಿಲ್ಲಿಂಗ್ ತಯಾರಿಸಲು:
ಸಿಹಿ ಕಂಡೆನ್ಸ್‌ಡ್ ಮಿಲ್ಕ್ – 30 ಎಂಎಲ್
ಮೊಟ್ಟೆ – 1
ವೆನಿಲ್ಲಾ ಸಾರ – 1 ಟೀಸ್ಪೂನ್
ಟಾಫಿ ಬಿಟ್ಸ್ – 1 ಕಪ್
ಬಾದಾಮಿ ಚೂರುಗಳು – 1 ಕಪ್ ಇದನ್ನೂ ಓದಿ: ಚಾಕ್ಲೇಟ್ ಪ್ರಿಯರಿಗಾಗಿ ಲಾವಾ ಕೇಕ್ ರೆಸಿಪಿ

Almond Toffee Bars 1

ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಬೆಣ್ಣೆ, ಹಿಟ್ಟು ಮತ್ತು ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ಗ್ರೀಸ್ ಮಾಡಿದ ಪ್ಯಾನ್‌ಗೆ ಹರಡಿ, ಸುಮಾರು 18 ನಿಮಿಷಗಳ ಕಾಲ ಓವನ್‌ನಲ್ಲಿ 325 ಡಿಗ್ರಿ ಪ್ಯಾರಾಹೀಟ್‌ಗೆ ಬಿಸಿ ಮಾಡಿ ಕ್ರಸ್ಟ್ ತಯಾರಿಸಿ.
* ಮತ್ತೊಂದು ಪಾತ್ರೆಯಲ್ಲಿ ಹಾಲು, ಮೊಟ್ಟೆ, ವೆನಿಲ್ಲಾ ಸಾರ ಹಾಕಿ ಚೆನ್ನಾಗಿ ಬಿಟ್ ಮಾಡಿ ಬಳಿಕ ಅದಕ್ಕೆ ಟಾಫಿ ಬಿಟ್ಸ್ ಹಾಗೂ ಬಾದಾಮಿ ಹಾಕಿ ಮಿಶ್ರಣ ಮಾಡಿ.
* ಈಗ ಬೇಯಿಸಿದ ಕ್ರಸ್ಟ್ ಮೇಲೆ ಹಾಲಿನ ಮಿಶ್ರಣ ಹಾಕಿ, ಮತ್ತೆ 25 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ನಂತರ ಅದನ್ನು ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
* ಬಳಿಕ ಚಾಕು ಸಹಾಯದಿಂದ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
* ಇದೀಗ ಬಾದಾಮಿ ಟಾಫಿ ಬಾರ್ಸ್ ತಯಾರಾಗಿದ್ದು, ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಟೇಸ್ಟಿ ಪೀನಟ್ ಬಟರ್

Share This Article